ಕೊಪ್ಪಳ: ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿದ್ದ ಪಿಎಸ್‌ಐನ್ನು ಅಮಾನತು ಮಾಡಿ ಕೊಪ್ಪಳ (Koppal) ಎಸ್ಪಿ ರಾಮ್ ಅರಸಿದ್ದಿ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿದ್ದ ಗುರುರಾಜ್‌ನ್ನು ಅಮಾನತು ಮಾಡಿದ್ದಾರೆ. ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಗಾಳೆಪ್ಪ ಎಂಬುವವರ ಮೇಲೆ ಪಿಎಸ್‌ಐ ಗುರುರಾಜ್ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಪಿಎಸ್‌ಐ ವಿರುದ್ಧ ದಲಿತ ಸಮುದಾಯದ ಮುಖಂಡರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಜೊತೆಗೆ ಹಲ್ಲೆ ಮಾಡಿದ್ದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಇದನ್ನೂ ಓದಿ: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್
ಪ್ರತಿಭಟನೆಗೆ ಮಣಿದ ಎಸ್‌ಪಿ ರಾಮ್ ಅರಸಿದ್ದಿ ಅವರು ಪಿಎಸ್‌ಐ ಗುರುರಾಜ್ ಅವರನ್ನು ಅಮಾನತು ಮಾಡಿ, ಆದೇಶಿಸಿದ್ದಾರೆ.