ಮಾಸ್ಕೋ ನಡು ಬೀದಿಯಲ್ಲಿ ಪುಟಿನ್‌ ಕಾರು ಸ್ಫೋಟ – ಹತ್ಯೆಗೆ ಯತ್ನ?

Public TV
1 Min Read

ಮಾಸ್ಕೋ: ಕೆಲವೇ ದಿನಗಳಲ್ಲಿ ಪುಟಿನ್‌ ಸಾವನ್ನಪ್ಪುತ್ತಾರೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಸಿ (Volodymyr Zelenskyy) ಭವಿಷ್ಯ ನುಡಿದ ಬೆನ್ನಲ್ಲೇ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಬಳಸುತ್ತಿದ್ದ ಲಿಮೋಸಿನ್‌ ಕಾರು (Limousine Car) ಸ್ಫೋಟಗೊಂಡಿದೆ.

ಮಾಸ್ಕೋ ನಗರದ ಫೈನಾನ್ಶಿಯಲ್‌ ಸ್ಟೆಬಿಲಿಟಿ ಬೋರ್ಡ್‌ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ 2,75,000 ಪೌಂಡ್‌ (ಅಂದಾಜು 3.04 ಕೋಟಿ ರೂ.) ಮೌಲ್ಯದ ಔರಸ್ ಸೆನಾಟ್ ಕಂಪನಿಯ ಲಿಮೋಸಿನ್‌ ಕಾರು ಸ್ಫೋಟಗೊಂಡಿದೆ. ಈಗ ಈ ಪ್ರದೇಶದಲ್ಲಿ ಭದ್ರತಾ ತಪಾಸಣೆ ಹೆಚ್ಚಾಗಿದೆ ಎಂದು ವರದಿಯಾಗಿದೆ.

‍ಸ್ಫೋಟಗೊಂಡ ಸಮಯದಲ್ಲಿ ಕಾರಿನಲ್ಲಿ ಯಾರು ಇದ್ದರು ಮತ್ತು ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.  ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ; ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ

ಮೊದಲು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮುಂಭಾಗದಿಂದ ದಟ್ಟವಾದ ಕಪ್ಪು ಹೊಗೆ ಬಂದಿದೆ. ಇದನ್ನೂ ಓದಿ: ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು

72 ವರ್ಷದ ಪುಟಿನ್ ನಿಯಮಿತವಾಗಿ ರಷ್ಯಾ ನಿರ್ಮಿತ ಲಿಮೋಸಿನ್‌ಗಳನ್ನು ಬಳಸುತ್ತಾರೆ. ಈ ಹಿಂದೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್‌ನಂತಹ ನಾಯಕರಿಗೆ ಇದೇ ರೀತಿಯ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು.

ಲಿಮೋಸಿನ್ ಒಂದು ಐಷಾರಾಮಿ, ಉದ್ದವಾದ ಚಕ್ರದ ಬೇಸ್ ಹೊಂದಿರುವ ವಾಹನವಾಗಿದ್ದು ಹಲವು ದೇಶಗಳ ಅಧ್ಯಕ್ಷರು ಈ ರೀತಿಯ ಕಾರನ್ನು ಬಳಕೆ ಮಾಡುತ್ತಾರೆ. ಇದು ಚಾಲಕ ಮತ್ತು ಪ್ರಯಾಣಿಕರ ನಡುವೆ ವಿಭಜನೆಯನ್ನು ಹೊಂದಿರುತ್ತದೆ. ಆರಾಮದಾಯಕ ಮತ್ತು ಹೆಚ್ಚಾಗಿ ಐಷಾರಾಮಿ ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗುತ್ತದೆ. ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಮಾತ್ರ ಬಳಸಲಾಗುತ್ತದೆ.

 

Share This Article