ಅಸ್ಸಾಂನಲ್ಲಿ ಇನ್ಮುಂದೆ ಅಸ್ಸಾಮಿ ಭಾಷೆಯಲ್ಲೇ ಸರ್ಕಾರಿ ಆದೇಶ, ಸುತ್ತೋಲೆ: ಸಿಎಂ ಹಿಮಂತ ಬಿಸ್ವ ಶರ್ಮಾ

Public TV
1 Min Read

ದಿಸ್ಪುರ್: ರಾಜ್ಯದ ಎಲ್ಲಾ ಸರ್ಕಾರಿ ಅಧಿಸೂಚನೆಗಳು, ಆದೇಶಗಳು ಮತ್ತು ಕಾಯ್ದೆಗಳಿಗೆ `ಅಸ್ಸಾಮಿ’ (Assamese) ಕಡ್ಡಾಯ ಅಧಿಕೃತ ಭಾಷೆಯಾಗಲಿದೆ. ಈ ಆದೇಶವು ಇಂದಿನಿಂದಲೇ ಜಾರಿಯಾಗಲಿದೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಘೋಷಿಸಿದರು.

ಬರಾಕ್ ಕಣಿವೆ ಮತ್ತು ಬಿಟಿಆರ್ ಜಿಲ್ಲೆಗಳಲ್ಲಿ ಬಂಗಾಳಿ ಮತ್ತು ಬೋಡೋ ಭಾಷೆಗಳನ್ನೂ ಕ್ರಮವಾಗಿ ಬಳಸಬೇಕು ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.  ಇದನ್ನೂ ಓದಿ: National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ಎಲ್ಲಾ ಸರ್ಕಾರಿ ಅಧಿಸೂಚನೆಗಳು, ಆದೇಶಗಳು ಅಸ್ಸಾಮಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಭಾರತ ಸರ್ಕಾರ, ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಇತರ ರಾಜ್ಯ ಸರ್ಕಾರಿ ಸಂಸ್ಥೆಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಭಾಷೆ (English Language) ಬಳಕೆಯನ್ನು ಮುಂದುವರಿಸಲಾಗುವುದು. ಅಲ್ಲದೇ ನ್ಯಾಯಾಲಯಗಳೊಂದಿಗಿನ ಎಲ್ಲಾ ವರದಿಗಳು ಮತ್ತು ಪತ್ರ ವ್ಯವಹಾರಗಳು ಸಹ ಇಂಗ್ಲಿಷ್‌ನಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

ಕಾಯಿದೆಗಳು, ನಿಯಮಗಳು, ನಿಬಂಧನೆಗಳು ಮತ್ತು ಅಧಿಸೂಚನೆಗಳನ್ನು ಒಳಗೊಂಡಿರುವ ಪರಂಪರೆ ದಾಖಲೆಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅಸ್ಸಾಮಿ ಭಾಷೆಗೆ ಅನುವಾದಿಸಲಾಗುತ್ತದೆ. ಭಾಷಾಂತರ ಕಾರ್ಯವನ್ನು ವಿಶ್ವವಿದ್ಯಾಲಯಗಳ ಭಾಷಾ ವಿಭಾಗಗಳ ಸಹಾಯದಿಂದ ಕೈಗೊಳ್ಳಬೇಕು. ಇಂಗ್ಲಿಷ್‌ನಿಂದ ಅಸ್ಸಾಮಿ, ಬಂಗಾಳಿ ಮತ್ತು ಬೋಡೋ ಭಾಷೆಗೆ ಭಾಷಾಂತರಿಸಲು `ಅನುವಾದ್ ಭಾಷಿಣಿ’ ಅಪ್ಲಿಕೇಶನ್ ಅನ್ನು ಬಳಸುವಂತೆ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

Share This Article