ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

Public TV
1 Min Read

ನವದೆಹಲಿ: ಅಸ್ಸಾಂನ ವ್ಯಕ್ತಿಯೊಬ್ಬ ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್ ಮಾಡಿದ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮೊಹಮ್ಮದ್ ತಾರಿಕ್ ಅಜೀಜ್ ಬಂಧಿತ ವ್ಯಕ್ತಿ. ಅಸ್ಸಾಂನ ದಿಮಾಪುರ್ ನಿವಾಸಿ ಮೊಹಮ್ಮದ್ ತಾರಿಕ್ ದುಬೈನಿಂದ ವಿಮಾನದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಅಸ್ಸಾಂಗೆ ಹಿಂತಿರುಗುತ್ತಿದ್ದರು.

ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮೊಹಮ್ಮದ್ ತಾರಿಕ್ ನೆಲದ ಮೇಲೆ ರಾಷ್ಟ್ರಧ್ವಜವನ್ನು ಇಟ್ಟು ನಮಾಜ್ ಮಾಡುತ್ತಿದ್ದುದನ್ನು ಸಿಐಎಸ್‍ಎಫ್ ಸೈನಿಕರು ನೋಡಿದರು. ಅನುಮಾನಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೊಹಮ್ಮದ್ ತಾರಿಕ್ ಅವರನ್ನು ಸಿಐಎಸ್‍ಎಫ್ ವಶಕ್ಕೆ ಪಡೆದಿದ್ದು, ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

POLICE JEEP

ಅಷ್ಟೇ ಅಲ್ಲದೇ ಮೊಹಮ್ಮದ್ ತಾರಿಕ್ ಅಜೀಜ್‍ನನ್ನು ಬಂಧಿಸಲಾಗಿದ್ದು, ಆತನ ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ಪ್ರಯಾಣ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ ಪೊಲೀಸರು ಸಿಸಿಟಿವಿಯನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಸಿಐಎಸ್‍ಎಫ್ ದೂರಿನ ಮೇರೆಗೆ ಮೊಹಮ್ಮದ್ ತಾರಿಕ್ ಅಜೀಜ್ ವಿರುದ್ಧ ರಾಷ್ಟ್ರೀಯ ಗೌರವದ ಅವಮಾನ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

ಘಟನೆ ಕುರಿತು ದೆಹಲಿ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಆದರೆ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದನ್ನೂ ಓದಿ: ಓಮಿಕ್ರಾನ್ ಉಪತಳಿ BA-4 ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

Share This Article
Leave a Comment

Leave a Reply

Your email address will not be published. Required fields are marked *