ಬೆಂಗಳೂರು: ರಾಜಧಾನಿಯಲ್ಲಿ ಪುಡಿ ರೌಡಿಗಳದ್ದೆ ದರ್ಬಾರ್ ಆಗಿದೆ. ನಗರದ ಯಲಹಂಕದ ಎನ್‍ಇಎಸ್ ಬಳಿ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ರೌಡಿಗಳ ಗುಂಪೊಂದು ಹಲ್ಲೆಗೆ ಯತ್ನಿಸಿದೆ.
ಈ ಘಟನೆ ಯಲಹಂಕದ ಎನ್‍ಇಎಸ್ ಬಳಿ ಇರುವ ಸಿಗ್ನಲ್ ಬಳಿ ನಡೆದಿದೆ. ಪುಡಿ ರೌಡಿಗಳ ರೌಡಿಸಂ ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟ್ರಾಫಿಕ್ ಸಿಗ್ನಲ್‍ನಲ್ಲಿ ಆಟೋದಲ್ಲಿದ್ದ ಇಬ್ಬರಿಗೂ ಬಿಎಂಟಿಸಿ ಸಿಬ್ಬಂದಿಗೂ ಗಲಾಟೆ ಆಗಿತ್ತು. ಈ ವೇಳೆ ಸಾರ್ವಜನಿಕರ ಸಮಾಧಾನಿಸಿ ಕಳುಹಿಸಿದ್ದರು. ಆದ್ರೆ ಸಿಗ್ನಲ್ ದಾಟಿದ ಬಳಿಕ ಎರಡು ಗುಂಪು ಕಟ್ಕೊಂಡು ಬಂದ ರೌಡಿಗಳು ಕಬ್ಬಿಣದ ರಾಡ್‍ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಪುಡಿರೌಡಿಗಳ ಆರ್ಭಟಕ್ಕೆ ಭಯಪಟ್ಟ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹಲ್ಲೆಗೊಳಗಾಗಿದ್ದ ಚಾಲಕ, ನಿರ್ವಾಹಕ ಕೇಸ್ ದಾಖಲಿಸಿದ್ದಾರೆ. ಘಟನೆ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.