ಏಷ್ಯನ್ ಗೇಮ್ಸ್ 2023 – ರಿಲೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡ ಭಾರತ

Public TV
2 Min Read

ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ 2023ನಲ್ಲಿ (Asian Games 2023) ಇಂದು (ಸೋಮವಾರ) ಭಾರತದ ರೋಲರ್ ಸ್ಕೇಟರ್‌ ಪುರುಷ ಮತ್ತು ಮಹಿಳೆಯರ 3000 ಮೀಟರ್ ತಂಡಗಳು ರಿಲೇ (Relay) ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು (Bronze Medals) ಗೆದ್ದುಕೊಂಡಿವೆ.

ಸ್ಪೀಡ್ ಸ್ಕೇಟಿಂಗ್ 3,000 ಮೀಟರ್ ರಿಲೆಯಲ್ಲಿ ಭಾರತದ ಅಥ್ಲೀಟ್‍ಗಳಾದ ಆರತಿ ಕಸ್ತೂರಿರಾಜ್, ಹೀರಾಲ್, ಸಂಜನಾ ಬತುಲಾ ಮತ್ತು ಕಾರ್ತಿಕಾ ಜಗದೀಶ್ವರನ್ ಅವರೊನ್ನೊಳಗೊಂಡ ಮಹಿಳಾ ತಂಡವು ಕಂಚಿನ ಪದಕ ಗಳಿಸಿತು. 4:34.861 ಸೆಕೆಂಡ್‍ಗಳೊಂದಿಗೆ ಆಟ ಪೂರ್ಣಗೊಳಿಸಿತು. ಹಾಗೆಯೇ, ಚೈನೀಸ್ ತೈಪೆ (4:19.447) ಮತ್ತು ದಕ್ಷಿಣ ಕೊರಿಯಾ 4:21.146 ಸೆಕೆಂಡ್‍ಗಳಲ್ಲಿ ಆಟ ಮುಕ್ತಾಯಗೊಳಿಸಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದುಕೊಂಡಿತು. ಇದನ್ನೂ ಓದಿ: Asian Games 2023: ಕೊನೇ ಪ್ರಯತ್ನದಲ್ಲಿ ಗುಂಡು ಎಸೆದು ಚಿನ್ನ ಗೆದ್ದ ಗಂಡುಗಲಿ – ಭಾರತಕ್ಕೆ ಒಂದೇ ದಿನ 15 ಪದಕ

ಇನ್ನು ಆರ್ಯನ್‍ಪಾಲ್ ಸಿಂಗ್ ಘುಮಾನ್, ಆನಂದಕುಮಾರ್ ವೆಲ್‍ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಳೆ ಅವರಿದ್ದ ಪುರುಷರ ತಂಡ ರಿಲೆಯಲ್ಲಿ 4:10.128 ಸೆಕೆಂಡ್‍ಗಳೊಂದಿಗೆ ಎರಡನೇ ಕಂಚಿನ ಪದಕ ಗೆದ್ದುಕೊಂಡಿತು. ಚೈನೀಸ್ ತೈಪೆ (4:05.692) ಮತ್ತು ದಕ್ಷಿಣ ಕೊರಿಯಾ (4:05.702) ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿತು. ಭಾರತೀಯ ರೋಲರ್ ಸ್ಕೇಟರ್‌ಗಳು ಗುವಾಂಗ್‍ಝೌ 2010ರ ಏಷ್ಯನ್ ಗೇಮ್ಸ್‍ನಲ್ಲಿ ಪುರುಷರ ಸ್ಕೇಟಿಂಗ್ ಮತ್ತು ಜೋಡಿ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು.

ಇಂದು ಏಷ್ಯನ್ ಗೆಮ್ಸ್‌ನಲ್ಲಿ ಭಾರತ ತಂಡ ಕಬಡ್ಡಿ ಪಂದ್ಯವನ್ನು ಆರಂಭಿಸಲಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರರು ಕೂಡ ಇಂದು ತಮ್ಮ ಸವಾಲನ್ನು ಎದುರಿಸಲಿದ್ದಾರೆ. ಭಾರತ ಒಟ್ಟಾರೆ 55 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ. ಭಾನುವಾರ ಬರೋಬ್ಬರಿ 15 ಪದಕಗಳನ್ನು ಬಾಚಿಕೊಂಡಿದ್ದ ಭಾರತ, ಇಂದು ಮತ್ತೆರೆಡು ಪದಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: Asian Games 2023: 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್‌

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್