Asian Games: ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನ

By
1 Min Read

ಬೀಜಿಂಗ್: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನ ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಟೆನ್ನಿಸ್‌ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ರೋಹನ್-ರುತುಜಾ ಜೋಡಿಯು ಪಂದ್ಯದ ಆರಂಭಿಕ ಸೆಟ್‌ನಲ್ಲಿ ಹೋರಾಟ ನಡೆಸಿತು. ಚೀನಾದ ತೈಪೆಯ ಎನ್-ಶುವೊ ಲಿಯಾಂಗ್ ಮತ್ತು ತ್ಸುಂಗ್-ಹಾವೊ ಹುವಾಂಗ್ ವಿರುದ್ಧ 6-2 ರಿಂದ ಮೊದಲ ಸೆಟ್ ಅನ್ನು ಕಳೆದುಕೊಂಡಿತು. ಭಾರತದ ಜೋಡಿ ಅದ್ಭುತ ಪುನರಾಗಮನ ಮಾಡಿದರು. ನಂತರ ತಮ್ಮ ಎದುರಾಳಿಗಳನ್ನು 3-6 ಮತ್ತು 4-10 ರಿಂದ ನೇರ ಎರಡು ಸೆಟ್‌ಗಳಲ್ಲಿ ಸೋಲಿಸಲು ಆಟದ ಮೇಲೆ ಪ್ರಾಬಲ್ಯ ಸಾಧಿಸಿದರು. ಇದನ್ನೂ ಓದಿ: Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

ಇದಕ್ಕೂ ಮೊದಲು ಬೋಪಣ್ಣ-ಭೋಸಲೆ ಜೋಡಿಯು ಚೈನೀಸ್ ತೈಪೆಯ ಯು-ಹ್ಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾಂಗ್ ವಿರುದ್ಧ ಶುಕ್ರವಾರ 6-1, 3-6, 10-4 ಅಂಕಗಳೊಂದಿಗೆ ಗೆಲುವು ದಾಖಲಿಸಿ ಪದಕ ಖಚಿತಪಡಿಸಿಕೊಂಡಿತ್ತು.

ಬೋಪಣ್ಣ-ಭೋಸಲೆ ಜೋಡಿಯು ಚೈನೀಸ್ ತೈಪೆಯ ಯು-ಹ್ಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾಂಗ್ ವಿರುದ್ಧ 6-1 ರಿಂದ ಮೊದಲ ಸೆಟ್ ಅನ್ನು ಗೆದ್ದುಕೊಂಡಿತ್ತು. ಆದಾಗ್ಯೂ, ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಜೋಡಿಯು ಎರಡನೇ ಸೆಟ್‌ನಲ್ಲಿ ನಿಯಂತ್ರಣ ಕಳೆದುಕೊಂಡಿತು. ಆದರೆ ಅವರು ಟೈಬ್ರೇಕರ್‌ನಲ್ಲಿ 10-4 ರಿಂದ ಮೇಲುಗೈ ಸಾಧಿಸಿ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟರು. ಇದನ್ನೂ ಓದಿ: Asian Games 2023: ಚಿನ್ನದ ಪದಕಕ್ಕೆ ಶಾರ್ಪ್‌ ಶೂಟ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

19ನೇ ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತ ತಂಡ ಒಟ್ಟು 34 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ 9 ಚಿನ್ನ, 13 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿವೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್