Asian Games 2023: ಕ್ರಿಕೆಟ್‌ನಲ್ಲಿ ಚಿನ್ನ – ಇತಿಹಾಸ ನಿರ್ಮಿಸಿದ ಭಾರತದ ಮಹಿಳೆಯರು

Public TV
3 Min Read

ಹ್ಯಾಂಗ್‌ಝೌ: ಇದೇ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ (Asian Games 2023) ಪಾಲ್ಗೊಂಡಿರುವ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ (Indian Women’s Team) ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. 2014ರಲ್ಲಿ ಕಂಚಿನ ಪದಕ ಗೆದ್ದಿದ್ದ ಶ್ರೀಲಂಕಾ ತಂಡ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಝೆಜಿಯಾಂಗ್ ಟೆಕ್‌ ವಿವಿ ಕ್ರೀಡಾಂಗಣದಲ್ಲಿಂದು ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತೀಯ ಮಹಿಳಾ ತಂಡ 20 ಓವರ್‌ಗಳಲ್ಲಿ 116 ರನ್‌ ಗಳಿಸಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ (SriLanka) ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 97 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಇದರಿಂದ ಭಾರತ 19 ರನ್‌ಗಳ ಜಯ ಸಾಧಿಸಿ ಚಿನ್ನದ ಪದಕ್ಕೆ ಕೊರಳೊಡ್ಡಿತು. ಇದನ್ನೂ ಓದಿ: Asian Games 2023: ಭಾರತಕ್ಕೆ ಮೂರು ಬೆಳ್ಳಿ, ಎರಡು ಕಂಚಿನ ಪದಕ

2010ರ ಏಷ್ಯನ್‌ ಗೇಮ್ಸ್‌ ಟೂರ್ನಿಯಲ್ಲಿ ಪಾಕಿಸ್ತಾನ ಚಿನ್ನ ಗೆದ್ದರೆ, ಬಾಂಗ್ಲಾದೇಶ ಬೆಳ್ಳಿ ಹಾಗೂ ಜಪಾನ್‌ ಕಂಚಿನ ಪದಕ ಗೆದ್ದುಕೊಂಡಿತ್ತು. 2014ರಲ್ಲಿ ಪಾಕಿಸ್ತಾನ ಸತತ 2ನೇ ಬಾರಿ ಚಿನ್ನ ಗೆದ್ದರೆ, ಬಾಂಗ್ಲಾದೇಶ ತಂಡ ಬೆಳ್ಳಿ ಹಾಗೂ ಶ್ರೀಲಂಕಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದ್ರೆ ಇದೇ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ಗೆ ತೆರಳಿದ ಭಾರತ ತಂಡ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿತು.

ಚೇಸಿಂಗ್‌ ಆರಂಭಿಸಿದ ಲಂಕಾ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಹಾಸಿನಿ ಪೆರೆರಾ, ನೀಲಾಕ್ಷಿ ಡಿ ಸಿಲ್ವಾ ಹಾಗೂ ಓಷದಿ ರಣಸಿಂಗ್ ಅವರಿಂದ ಸಣ್ಣ ಪ್ರಮಾಣದ ಜೊತೆಯಾಟ ಬಂದರೂ ತಂಡ ನಿಗದಿತ ರನ್‌ ಕಲೆಹಾಕುವಲ್ಲಿ ವಿಫಲವಾಯಿತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿ ಮಂಡಿಯೂರಿತು.

ಟೀಂ ಇಂಡಿಯಾ ಪರ ಟಿಟಾಸ್‌ ಸಾಧು 4 ಓವರ್‌ನಲ್ಲಿ 3 ವಿಕೆಟ್‌ ಕಿತ್ತರೆ, ರಾಜೇಶ್ವರಿ ಗಾಯಕ್ವಾಡ್‌ 2 ವಿಕೆಟ್‌ ಹಾಗೂ ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್‌, ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: Asian Games Women’s Cricket: ಬಾಂಗ್ಲಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕಾರ ಶಫಾಲಿ ವರ್ಮಾ 9 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. 2ನೇ ವಿಕೆಟ್‌ಗೆ ಜೊತೆಯಾದ ಸ್ಮೃತಿ ಮಂಧಾನ (Smriti Mandhana) ಹಾಗೂ ಜೆಮಿಮಾ ರೊಡ್ರಿಗಸ್‌ 67 ಎಸೆತಗಳಲ್ಲಿ 73 ರನ್‌ಗಳ ಜೊತೆಯಾಟ ನೀಡುವ ಮೂಲಕ ಚೇತರಿಕೆ ನೀಡಿದರು. ಇದರಿಂದ 100 ರನ್‌ಗಳ ಗಡಿ ದಾಟುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಆದರೆ ರಿಚಾ ಘೋಷ್ 9, ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) 2 ರನ್‌, ಪೂಜಾ ವಸ್ತ್ರಾಕರ್ 2 ರನ್ ಗಳನ್ನು ಮಾತ್ರಗಳಿಸಿ ನಿರಾಸೆ ಮೂಡಿಸಿದರು.

ಶ್ರೀಲಂಕಾ ಪರ ಉದೇಶಿಕ ಪ್ರಬೋಧನಿ, ಸೌಗಂದಿಕಾ ಕುಮಾರಿ ಮತ್ತು ಇನೋಕಾ ರಣವೀರಾ ತಲಾ 2 ವಿಕೆಟ್ ಪಡೆದು ಮಿಂಚಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್