Asian Games 2023: 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್‌

By
1 Min Read

ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ (Asian Games) 8ನೇ ದಿನವಾದ ಭಾನುವಾರವೂ ಭಾರತೀಯ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿದ್ದಾರೆ. 3,000 ಮೀಟರ್ ಸ್ಟೀಪಲ್ ಚೇಸ್​ ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್ (Avinash Sable) ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮತ್ತು ಸ್ಟೀಪಲ್‌ ಚೇಸ್‌ (Steeplechase) ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಎಂಬ ಖ್ಯಾತಿಗೂ ಅವಿನಾಶ್ ಸೇಬಲ್ (29) ಪಾತ್ರರಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ – ಸೂಪರ್‌ ಓವರ್‌ ಟೈ ಆದ್ರೆ ಬೌಂಡರಿಯನ್ನು ಪರಿಗಣಿಸಲಾಗುತ್ತಾ? 2019ರಲ್ಲಿ ಏನಾಗಿತ್ತು?

8:19:50 ಸೆಕೆಂಡುಗಳಲ್ಲಿ 3,000 ಮೀಟರ್ ಗುರಿ ತಲುಪುವ ಮೂಲಕ ಅವಿನಾಶ್‌ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ 2018ರ ಜಕಾರ್ತಾ ಗೇಮ್ಸ್‌ನಲ್ಲಿ ಇರಾನ್‌ನ ಹುಸೇನ್ ಕೀಹಾನಿ 8:22.79 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ವಿಶ್ವದಾಖಲೆಯಾಗಿತ್ತು. ಇದೀಗ ಹುಸೇನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅವಿನಾಶ್‌ ಮುರಿದು ಸಾಧನೆ ಮಾಡಿದ್ದಾರೆ.

8ನೇ ದಿನವಾದ ಭಾನುವಾರ ಭಾರತ ಪದಕಗಳ ಬೇಟೆ ಮುಂದುವರಿಸಿದೆ. ಈವರೆಗೆ ಭಾರತಕ್ಕೆ 13 ಚಿನ್ನ, 16 ಬೆಳ್ಳಿ ಮತ್ತು 16 ಕಂಚು ಸೇರಿ ಒಟ್ಟು 45 ಪದಕಗಳು ಸಂದಿವೆ. ಇದನ್ನೂ ಓದಿ: ಬೀಫ್‌ ನೀಡಲ್ಲ ಅಂದ BCCI; ಚಿಕನ್‌, ಮಟನ್‌, ಫಿಶ್‌ ಔತಣಕ್ಕೆ ಪಾಕ್‌ ಆಟಗಾರರು ಫಿದಾ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article