Asian Games 2023: ಈಕ್ವೆಸ್ಟ್ರೀಯನ್‌ನಲ್ಲಿ ಭಾರತಕ್ಕೆ ಕಂಚು – ಇತಿಹಾಸ ನಿರ್ಮಿಸಿದ ಅನುಷ್‌

By
2 Min Read

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನ (Asian Games 2023) ಈಕ್ವೆಸ್ಟ್ರೀಯನ್‌ ವೈಯಕ್ತಿಕ ಡ್ರೆಸ್ಸೇಜ್ (Equestrian Dressage) ವಿಭಾಗದಲ್ಲಿ ಭಾರತದ ಅನುಷ್​ ಅಗರ್ವಾಲಾ (Anush Agarwalla)​ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಇದು ಈಕ್ವೆಸ್ಟ್ರೀಯನ್‌ (Equestrian) ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ. ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ 71.706 ಅಂಕಗಳೊಂದಿಗೆ 4ನೇ ಸ್ಥಾನ ಪಡೆದು 15 ಮಂದಿ ಪ್ರತಿನಿಧಿಸುವ ಫೈನಲ್‌ ಸುತ್ತಿಗೆ ಅರ್ಹತೆ ಪಡೆದಿದ್ದರು. ಗುರುವಾರ ನಡೆದ ಫೈನಲ್‌ನಲ್ಲಿ 73.030 ಅಂಕ ಪಡೆದು ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತದ ಮತ್ತೋರ್ವ ಕುದುರೆ ಸವಾರ ಹೃದಯ್​ ವಿಪುಲ್​ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಅರ್ಹತಾ ಸುತ್ತಿನಲ್ಲಿ 73.8873 ಅಂಕಗಳಿಸಿ ಫೈನಲ್​ ಪ್ರವೇಶಿಸಿದ್ದ ಹೃದಯ್‌ ಫೈನಲ್​ನಲ್ಲಿ ಇದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲರಾಗಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್‌ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್‌

ಮಂಗಳವಾರ ನಡೆದಿದ್ದ ಈಕ್ವೆಸ್ಟ್ರಿಯನ್‌ನ ಡ್ರೆಸ್ಸೇಜ್‌ ತಂಡ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ಧ ತಂಡದಲ್ಲಿಯೂ ಅನುಷ್​ ಅಗರ್ವಾಲಾ ಸ್ಪರ್ಧಿಸಿದ್ದರು. 1982ರ ನವದೆಹಲಿಯ ಏಷ್ಯನ್​ ಗೇಮ್ಸ್‌ನಲ್ಲಿ ಮೊದಲ ಬಾರಿ ಈಕ್ವೆಸ್ಟ್ರಿಯನ್‌ ಸ್ಪರ್ಧೆಯನ್ನು ಪರಿಚಯಿಸಲಾಗಿತ್ತು. ಆ ಕ್ರೀಡಾಕೂಟದಲ್ಲಿ ಭಾರತ 3 ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು.

ಡ್ರೆಸ್ಸೇಜ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ತೀರ್ಪುಗಾರರನ್ನ ಮೆಚ್ಚಿಸಿದ ಅನುಷ್ ಅಗರ್‌ವಾಲಾ ಮತ್ತು ಎಟ್ರೋ ಸಂಗೀತಕ್ಕೆ ಪರಿಪೂರ್ಣ ಸಿಂಕ್‌ನಲ್ಲಿ ಸಂಯೋಜಿಸಲ್ಪಟ್ಟರು. ಜನಪ್ರಿಯ ಚಾರ್ಬಸ್ಟರ್ ಜೈ ಹೋ, ಫೈನಲ್‌ನಲ್ಲಿ ಭಾರತೀಯ ಪ್ರದರ್ಶನದ ಸಮಯದಲ್ಲಿ ನುಡಿಸಲಾದ ಹಾಡುಗಳಲ್ಲಿ ಒಂದಾಗಿತ್ತು. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಕೈಕೊಟ್ಟರೂ ಬೌಲಿಂಗ್‌ನಲ್ಲಿ ಕೈಹಿಡಿದ ಮ್ಯಾಕ್ಸಿ – ಪಂದ್ಯ ಸೋತು ಸರಣಿ ಗೆದ್ದ ಭಾರತ

ಫೈನಲ್‌ನಲ್ಲಿ 15 ರೈಡರ್‌ಗಳಲ್ಲಿ ಕೊನೆಯ ರೈಡರ್‌ ಆಗಿದ್ದ ಅಗರ್‌ವಾಲಾ ಉತ್ತಮ ಪ್ರದರ್ಶನದೊಂದಿಗೆ ಪದಕ ಸ್ಥಾನಕ್ಕೆ ಜಿಗಿದರು. ಫೈನಲ್‌ ಪಂದ್ಯದಲ್ಲಿ ಅನುಷ್‌ಗೂ ಮುನ್ನ ರೈಡಿಂಗ್‌ನಲ್ಲಿದ್ದ ಎಟ್ರೋ 69.900 ಅಂಕಗಳನ್ನಷ್ಟೇ ಪಡೆದುಕೊಂಡರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್