ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

Public TV
2 Min Read

ಮುಂಬೈ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (28) (Sanju Samson), ಮುಂಬರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಪರ ಆಡಲು ಕಂಡಿದ್ದ ಕನಸು ಬಹುತೇಕ ಭಗ್ನವಾದಂತೆ ಕಾಣ್ತಿದೆ.

ಇದೇ ಆಗಸ್ಟ್‌ 30ರಿಂದ ಶುರುವಾಗಲಿರುವ ಏಕದಿನ ಏಷ್ಯಾ ಕಪ್‌ (Asia Cup 2023) ಕ್ರಿಕೆಟ್‌ ಟೂರ್ನಿ ಸಲುವಾಗಿ ಆಗಸ್ಟ್‌ 21ರಂದು (ಸೋಮವಾರ) ಟೀಂ ಇಂಡಿಯಾ ಆಯ್ಕೆ ಸಮಿತಿ, 17 ಆಟಗಾರರ ಬಲಿಷ್ಠ ತಂಡವನ್ನ ಪ್ರಕಟ ಮಾಡಿದೆ. ಆದ್ರೆ ಸಂಜು ಸ್ಯಾಮ್ಸನ್‌ ಇದರಲ್ಲಿ ಸ್ಥಾನ ಪಡೆಯದೇ ಬ್ಯಾಕಪ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ರಿಂಕು, ಸಂಜು ಸ್ಫೋಟಕ ಬ್ಯಾಟಿಂಗ್‌ – 33 ರನ್‌ಗಳ ಜಯ, ಸರಣಿ ಗೆದ್ದ ಟೀಂ ಇಂಡಿಯಾ

ತಂಡ ಪ್ರಕಟ ಮಾಡಿದ ಬೆನ್ನಲ್ಲೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌, ಮುಂಬರುವ ಐಸಿಸಿ ಒಡಿಐ ವಿಶ್ವಕಪ್‌ ಟೂರ್ನಿಗೂ ಈ ಆಟಗಾರರ ಸುತ್ತಿನ ತಂಡವನ್ನ ಆಯ್ಕೆ ಮಾಡಲಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಏಷ್ಯಾಕಪ್‌ಗೆ ಏಕೈಕ ಬ್ಯಾಕಪ್‌ ಆಟಗಾರನಾಗಿ ಆಯ್ಕೆ ಆಗಿರುವ ಸಂಜು ಸ್ಯಾಮ್ಸನ್‌ಗೆ, ಒಡಿಐ ವಿಶ್ವಕಪ್‌ಗೆ ತೆಗೆದುಕೊಳ್ಳುವ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಸಿಗುವುದು ಬಹುತೇಕ ಕಷ್ಟವಾಗಿದೆ.

ಇಬ್ಬರು ಕನ್ನಡಿಗರಿಗೆ ಸ್ಥಾನ:
ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಕೆ.ಎಲ್‌ ರಾಹುಲ್‌ ಜೊತೆಗೆ ಯುವ ವೇಗಿ ಪ್ರಸಿದ್ಧ್‌ ಕೃಷ್ಣ ಅವರಿಗೂ ಸ್ಥಾನ ಕಲ್ಪಿಸಲಾಗಿದೆ. ಗಾಯದಿಂದ ಸಂಪೂರ್ಣ ಫಿಟ್‌ ಆಗಿರುವ ಪ್ರಸಿಧ್‌ ಪ್ರಸ್ತುತ ಐರ್ಲೆಂಡ್‌ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡುತ್ತಿದ್ದು, ಉತ್ತಮ ಪ್ರದರ್ಶನ ತೋರಿದ್ದಾರೆ. ಇದರ ಫಲವಾಗಿ ಅವರನ್ನ ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆ ಮಾಡಲಾಗಿದೆ.

ಸೂರ್ಯನ ಮೇಲೆ ಭರವಸೆ:
ಕೆ.ಎಲ್‌ ರಾಹುಲ್ ಮತ್ತು ಶ್ರೇಯಸ್‌ ಅಯ್ಯರ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿರುವ ಕಾರಣ ಸಂಜು ಸ್ಯಾಮ್ಸನ್‌ಗೆ ಅವಕಾಶ ಕೈತಪ್ಪಿದೆ. ಜೊತೆಗೆ ಸುರ್ಯಕುಮಾರ್‌ ಯಾದವ್‌ ಮೇಲೆ ಸೆಲೆಕ್ಟರ್ಸ್‌ ಭರವಸೆ ಮುಂದುವರಿಸಿದ್ದು, ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಅಲ್ಲಿನ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿಯೂ ಅಬ್ಬರಿಸಿದ ಯುವ ಆಟಗಾರ ತಿಲಕ್‌ ವರ್ಮಾಗೆ ಸೆಲೆಕ್ಟರ್ಸ್‌ ಮಣೆಹಾಕಿ ಸ್ಯಾಮ್ಸನ್‌ ಕೈಬಿಟ್ಟಿದ್ದಾರೆ. ಇದನ್ನೂ ಓದಿ: WorldCup 2023: ಬಿಸಿಸಿಐಗೆ ಹೊಸ ತಲೆನೋವು – ವೇಳಾಪಟ್ಟಿ ಬದಲಾವಣೆಗೆ ಹೈದರಾಬಾದ್‌ ಅಧಿಕಾರಿಗಳಿಂದ ಮನವಿ

ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಕ್ಯಾಪ್ಟನ್‌ ಆಗಿರುವ ಸಂಜು ಸ್ಯಾಮ್ಸನ್‌, ಏಕದಿನ ಕ್ರಿಕೆಟ್‌ನಲ್ಲಿ ಸಿಕ್ಕಿರುವ ಕೆಲವೇ ಅವಕಾಶಗಳಲ್ಲಿ ಮಿಂಚಿ 55ಕ್ಕೂ ಹೆಚ್ಚಿನ ಬ್ಯಾಟಿಂಗ್‌ ಸರಾಸರಿ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ಧದ ಒಡಿಐ ಸರಣಿಯ ಕೊನೇ ಪಂದ್ಯದಲ್ಲಿ ಸಂಜು 40 ಎಸೆತಗಳಲ್ಲಿ 51 ರನ್‌ ಸಿಡಿಸಿದ್ದರು. ಆದರೂ ಒಡಿಐನಲ್ಲಿ ಸತತ ವೈಫಲ್ಯ ಕಂಡಿರುವ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮಾ ಮೇಲೆ ಸೆಲೆಕ್ಟರ್ಸ್‌ ಭರವಸೆ ಇಟ್ಟಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್