ಏಷ್ಯಾ ಇಲೆವೆನ್ vs ವರ್ಲ್ಡ್ ಇಲೆವೆನ್: ಕೊಹ್ಲಿ, ರಾಹುಲ್ ಸೇರಿ ಐವರು ಭಾರತೀಯರಿಗೆ ಸ್ಥಾನ

Public TV
2 Min Read

– ಟೂರ್ನಿಯಲ್ಲಿ ಪಾಕ್ ಆಟಗಾರರಿಗಿಲ್ಲ ಅವಕಾಶ

ಢಾಕಾ: ತಮ್ಮ ದೇಶದ ಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಈ ವರ್ಷದ ಮಾರ್ಚ್ ನಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವೆ ಎರಡು ಟಿ20 ಟೂರ್ನಿ ಆಯೋಜಿಸಿದೆ.

ವಿಶ್ವ ಕ್ರಿಕೆಟ್‍ನ ಕೆಲವು ಸ್ಟಾರ್ ಆಟಗಾರರು ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಸ್ನೇಹಪರ ಪಂದ್ಯದ ಭಾಗವಾಗಲಿದ್ದಾರೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಏಷ್ಯಾ ಇಲೆವೆನ್‍ನ ತಂಡ 15 ಆಟಗಾರರ ಪಟ್ಟಿಯನ್ನು ಬಿಸಿಬಿ ಮಂಗಳವಾರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಕನ್ನಡಿಗನ ಪರ ಬ್ಯಾಟ್ ಬೀಸಿ, ಮ್ಯಾನೇಜ್‍ಮೆಂಟ್ ವಿರುದ್ಧ ಕಿಡಿಕಾರಿದ ಕಪಿಲ್ ದೇವ್

ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ ಐವರು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದು ಹೆಮ್ಮೆಯ ವಿಚಾರವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ವೇಗಿ ಮೊಹಮ್ಮದ್ ಶಮಿ ಏಷ್ಯಾ ಇಲೆವೆನ್ ಪರ ಆಡಲಿದ್ದಾರೆ. ಇದನ್ನೂ ಓದಿ: ಕೆ.ಎಲ್.ರಾಹುಲ್ ‘360 ಡಿಗ್ರಿ’ ಬ್ಯಾಟ್ಸ್‌ಮನ್‌: ಮಂಜ್ರೇಕರ್

ಏಷ್ಯಾ ಇಲೆವೆನ್‍ನಲ್ಲಿ ಭಾರತವು ಗರಿಷ್ಠ ಸಂಖ್ಯೆಯ ಪ್ರಾತಿನಿಧ್ಯವನ್ನು ಹೊಂದಿದ್ದು, ಐದು ಆಟಗಾರರು ಭಾಗವಹಿಸಲಿದ್ದಾರೆ. ಬಾಂಗ್ಲಾದೇಶದ ನಾಲ್ವರು ಆಟಗಾರರಾದ ತಮೀಮ್ ಇಕ್ಬಾಲ್, ಲಿಟನ್ ದಾಸ್ ಮತ್ತು ಮುಷ್ಫಿಕರ್ ರಹೀಮ್ ಮತ್ತು ಮುಸ್ತಾಫಿಜುರ್ ರಹಮಾನ್ ಏಷ್ಯಾ ಇಲೆವೆನ್ ತಂಡದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಿಂದ ತಲಾ 2 ಆಟಗಾರರನ್ನು ಒಳಗೊಂಡ 15 ಸದಸ್ಯರ ತಂಡದಲ್ಲಿ ಯಾವುದೇ ಪಾಕಿಸ್ತಾನಿ ಆಟಗಾರನನ್ನು ಸೇರಿಸಲಾಗಿಲ್ಲ. ನೇಪಾಳದ ಪರ ಸಂದೀಪ್ ಲಮಿಚಾನೆ ಮಾತ್ರ ಪ್ರತಿನಿಧಿಸಲಿದ್ದಾರೆ . ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್

ಏಷ್ಯಾ ಇಲೆವೆನ್ ತಂಡ:
ಕೆ.ಎಲ್. ರಾಹುಲ್, ಶಿಖರ್ ಧವನ್, ತಮೀಮ್ ಇಕ್ಬಾಲ್, ವಿರಾಟ್ ಕೊಹ್ಲಿ, ಲಿಟಾನ್ ದಾಸ್, ರಿಷಭ್ ಪಂತ್, ಮುಶ್ಫಿಕೂರ್ ರಹೀಮ್, ಥಿಸರಾ ಪೆರೆರಾ, ರಶೀದ್ ಖಾನ್, ಮುಸ್ತಾಫಿಜುರ್ ರಹಮಾನ್, ಸಂದೀಪ್ ಲಾಮಿಚ್ಚಾನೆ, ಲಸಿತ್ ಮಾಲಿಂಗ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.

Share This Article
Leave a Comment

Leave a Reply

Your email address will not be published. Required fields are marked *