ಏಷ್ಯಾ ಸ್ಟಾರ್ ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್

Public TV
2 Min Read

ಫ್ಯಾಶನ್ ಲೋಕದಲ್ಲಿ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಸಾಧನೆಗೈಯುತ್ತ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಗೆ ಪಾತ್ರರಾಗಿರುವ ಕನ್ನಡದ ಪ್ರತಿಭೆ ಫಾರೆವರ್ ನವೀನ್ ಕುಮಾರ್. ಸ್ಟಾರ್ ಡಿಸೈನರ್ Forever Naveen Kumar ವಿಶಿಷ್ಟ ವಿನ್ಯಾಸ ಹಾಗೂ ಕಣ್ಣು ಕೋರೈಸೋ ಬಟ್ಟೆಗಳಿಂದ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗಳಿಸಿಕೊಂಡಿದ್ದಾರೆ. ಸದಾ ಹೊಸತನದ ಮೂಲಕ ಫ್ಯಾಶನ್ ಇವೆಂಟ್ ಎದುರುಗೊಳ್ಳುವ ಇವರು ಜಾಗತಿಕ ಮಟ್ಟದ ಫ್ಯಾಶನ್ ಡಿಸೈನರ್‌ಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಇದೀಗ ಫಾರೆವರ್ ನವೀನ್ ಕುಮಾರ್ ಮತ್ತೊಂದು ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್ ಡಿಸೆಂಬರ್ 31, 2021ರಂದು ಕೊಲಂಬೋದಲ್ಲಿ ನಡೆದಿದೆ. ಮೆಟ್ ಗಾಲಾ ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯ ಫ್ಯಾಶನ್ ಇವೆಂಟ್. ಇವರು ಮೊಟ್ಟ ಮೊದಲ ಬಾರಿಗೆ ಏಷ್ಯಾ ಮಟ್ಟದಲ್ಲಿ ಹಮ್ಮಿಕೊಂಡ ಏಷ್ಯಾ ಸ್ಟಾರ್ ಗಾಲಾ (Asia Star Gala) ಇವೆಂಟ್ ಕಳೆದ ವರ್ಷದ ಕೊನೆಯ ದಿನ ನಡೆದಿದೆ. ಸಾಕಷ್ಟು ವಿಶೇಷತೆಯನ್ನು ಒಳಗೊಂಡ ಈ ಇವೆಂಟ್ ವಿಮಾನ ನಿಲ್ದಾಣದ ರನ್ ವೇನಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಬೇರೆ- ಬೇರೆ ದೇಶದ ಪ್ರಖ್ಯಾತ ಫ್ಯಾಶನ್ ಡಿಸೈನರ್‌ಗಳು ಹಾಗೂ ನಟಿಮಣಿಯರು ಪಾಲ್ಗೊಂಡ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಭಾರತದಿಂದ ಪ್ರತಿನಿಧಿಸಿದ ಏಕೈಕ ಫ್ಯಾಶನ್ ಡಿಸೈನರ್ ಎಂದರೆ ಅದು ಫಾರೆವರ್ ನವೀನ್ ಕುಮಾರ್.

ಇವರ ಜೊತೆಗೆ ಇವ್ರ ಫ್ಯಾಶನ್ ಡಿಸೈನ್‌ಗಳ ಬ್ರ್ಯಾಂಡ್ ಅಂಬಾಸಿಡರ್ ನಟಿ ಸಂಹಿತ ವಿನ್ಯಾ ಕೂಡ ಪಾಲ್ಗೊಂಡಿದ್ದಾರೆ. ಭಾರತದಿಂದ ಮೆಟ್ ಗಾಲಾ ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ ನಟಿಮಣಿಯರೆಂದರೆ ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ದೀಪಿಕಾ ಪಡುಕೋಣೆ. ಇವರ ಸಾಲಿಗೆ ಕನ್ನಡದ ನಟಿ ಸಂಹಿತ ವಿನ್ಯಾ ಸೇರಿರೋದು ಹೆಮ್ಮೆಯ ವಿಚಾರ. ಏಷ್ಯಾ ಸ್ಟಾರ್ ಗಾಲಾ ಇವೆಂಟ್ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಫಾರೆವರ್ ನವೀನ್ ಕುಮಾರ್ 5.7 ಅಡಿ ಎತ್ತರದ ಫೆದರ್ ವಿಂಗ್ಸ್ ಡಿಸೈನ್ ಶೋಕೇಸ್ ಮಾಡಿದ್ದಾರೆ. ಈ ಡಿಸೈನ್ ಅಲ್ಲಿ ನೆರೆದಿದ್ದವರ ಕಣ್ಣು ಕೋರೈಸಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ಇವೆಂಟ್ ಡಿಸೈನರ್ ನವೀನ್ ಕುಮಾರ್ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಗದಷ್ಟು ದುಪ್ಪಟ್ಟು ಮಾಡಿದೆ.

2016ರಿಂದ ಫ್ಯಾಶನ್ ಲೋಕದಲ್ಲಿ ಡಿಸೈನರ್ ಆಗಿ ಗುರುತಿಸಿಕೊಂಡಿರುವ ನವೀನ್ ಕುಮಾರ್ ಫಾರೆವರ್ ನವೀನ್ ಕುಮಾರ್ ಬ್ರ್ಯಾಂಡ್ ಮೂಲಕವೇ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ರ್ಯಾಂಡ್, ವಿಶಿಷ್ಟ ವಿನ್ಯಾಸ ಹಾಗೂ ವಿಶೇಷತೆಯಿಂದ ಅತಿ ಕಡಿಮೆ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಫಾರೆವರ್ ನವೀನ್ ಕುಮಾರ್ ಸ್ಟಾರ್ ಡಿಸೈನರ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಭಾರತದ ಹಲವು ಸ್ಟಾರ್ ನಟ ನಟಿಯರ ನೆಚ್ಚಿನ ಡಿಸೈನರ್ ಇವರಾಗಿದ್ದು, ಅನೇಕ ಟಿವಿ ಶೋಗಳಿಗೆ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪರಿಶ್ರಮ, ಶ್ರದ್ಧೆ ಹಾಗೂ ವಿಶಿಷ್ಟತೆ ಮೂಲಕ ಭಾರತದ ಕೀರ್ತಿಯನ್ನು ಫ್ಯಾಶನ್ ಲೋಕದಲ್ಲಿ ಇನ್ನಷ್ಟು ಹೆಚ್ಚಿಸುತ್ತಿರುವ ಫಾರೆವರ್ ನವೀನ್ ಕುಮಾರ್ ಬೆಂಗಳೂರಿನವರು, ಕನ್ನಡಿಗ ಎನ್ನುವುದೇ ಹೆಮ್ಮೆಯ ವಿಚಾರ.

Share This Article
Leave a Comment

Leave a Reply

Your email address will not be published. Required fields are marked *