ಏಷ್ಯಾ ಕಪ್ ಟಿ20 ಕ್ರಿಕೆಟ್ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮಧ್ಯೆ ನಡೆದರೆ ಸೆ.28ರಂದು ಫೈನಲ್ ಪಂದ್ಯ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಪಾಕಿಸ್ತಾನದ ವಿರುದ್ಧ ಸೂಪರ್ ಸಂಡೇ ಹೈವೋಲ್ಟೇಜ್ ಪಂದ್ಯವನ್ನಾಡಲಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಪಂದ್ಯ ಶುರುವಾಗಲಿದೆ. ಈಹೊತ್ತಿನಲ್ಲಿ ಏಷ್ಯಾಕಪ್ ಆವೃತ್ತಿಯ ಇತಿಹಾಸ ತಿಳಿಯುವುದೂ ಅಷ್ಟೇ ಸೂಕ್ತವಾಗಿದೆ.
30 ವರ್ಷಗಳ ಇತಿಹಾಸ ನೀವೂ ತಿಳಿಯಿರಿ
ಏಷ್ಯಾ ಕಪ್ ಟೂರ್ನಿಗೆ 30 ವರ್ಷಗಳ ಇತಿಹಾಸವಿದೆ. ಮೊದಲಬಾರಿಗೆ ಏಷ್ಯನ್ ಕ್ರಿಕೆಟ್ ಸಮಿತಿ (ACC)ಯು ಏಷ್ಯಾದ ಅತ್ಯುತ್ತಮ ತಂಡವನ್ನು ನಿರ್ಧರಿಸುವ ಸಲುವಾಗಿ 1984ರಲ್ಲಿ ಶಾರ್ಜಾದಲ್ಲಿ ಏಷ್ಯಾಕಪ್ ಹಮ್ಮಿಕೊಂಡಾಗ ಏಕದಿನ ಮಾದರಿಯಲ್ಲೇ ನಡೆಸುವುದೆಂದು ನಿರ್ಧಾರ ಆಗಿತ್ತು . ಆಗ ಟಿ20 ಮಾದರಿ ಸಹ ಇರಲಿಲ್ಲ ಎಂಬುದು ಸಹ ಗಮನಾರ್ಹ. ಆದರೆ ಈ ರೀತಿ ಪ್ರತಿಬಾರಿ ಮಾದರಿ ಬದಲಾಯಿಸುವ ಪರಿಪಾಠ ಕಳೆದ 10 ವರ್ಷಗಳಿಂದ ಸಾಗಿ ಬಂದಿದೆ. 2009ರ ಬಳಿಕ ಈ ಟೂರ್ನಿ ಪ್ರತಿ 2 ವರ್ಷಗಳಿಗೊಮ್ಮೆ ನಿಯಮಿತವಾಗಿ ನಡೆಸಲು ನಿರ್ಧರಿಸಲಾಯಿತು. ಆದರೆ 2015ರಲ್ಲಿ ಮುಂದಿನ ವಿಶ್ವ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಡೆಸುವ ನಿರ್ಧಾರಕ್ಕೆ ಬರಲಾಯಿತು. ಹಾಗಾಗಿ 2026ರ ಈ ಬಾರಿಯ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ.
ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?
ಪಹಲ್ಗಾಮ್ ಉಗ್ರರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್ (India vs Pakistan) ತಂಡಗಳು ತಂಡಗಳು ಬಹುರಾಷ್ಟ್ರೀಯ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಪ್ರಶಸ್ತಿ ಸುತ್ತಿಗೆ ಬಂದ್ರೆ ಉಭಯ ತಂಡಗಳು ಒಂದಲ್ಲ ಮೂರು ಬಾರಿ ಕಾದಾಟ ನಡೆಸುವ ಸಾಧ್ಯತೆಯಿದೆ.
ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟವಾಡಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್ 6 ಪ್ರವೇಶಿಸಿದ್ರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್ 6 ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಭಾರತವೇ ಯಶಸ್ವಿ ತಂಡ
ಏಷ್ಯಾಕಪ್ ಇಲ್ಲಿಯವರೆಗೆ 16 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಏಷ್ಯಾಕಪ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಭಾರತ ಆಗಿದೆ.
ಭಾರತ – 8 ಪ್ರಶಸ್ತಿಗಳು
ಶ್ರೀಲಂಕಾ – 6 ಪ್ರಶಸ್ತಿಗಳು
ಪಾಕಿಸ್ತಾನ – 2 ಪ್ರಶಸ್ತಿಗಳು
ರನ್ನರ್ ಅಪ್
ಶ್ರೀಲಂಕಾ – 7 ಬಾರಿ ರನ್ನರ್ ಅಪ್
ಭಾರತ – 3 ಬಾರಿ ರನ್ನರ್ ಅಪ್
ಪಾಕಿಸ್ತಾನ – 3 ಬಾರಿ ರನ್ನರ್ ಅಪ್
ಬಾಂಗ್ಲಾದೇಶ – 3 ಬಾರಿ ರನ್ನರ್ ಅಪ್