Asia Cup 2025 | ಔಟ್‌ ಅಲ್ಲ ನಾಟೌಟ್‌ – ಅಂಪೈರ್‌ ತೀರ್ಪಿನ ವಿರುದ್ಧ ಸಿಡಿದ ಫಖರ್‌ ಝಮಾನ್‌

Public TV
2 Min Read

ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 (Asia Cup Super Four) ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಂದು ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಆದ್ರೆ ಈ ಪಂದ್ಯದ ಮೊದಲ ವಿವಾದಕ್ಕೆ ಕಾರಣ ಟಿವಿ ಅಂಪೈರ್‌ ತೀರ್ಪು.

ಹೌದು. ಪಾಕ್‌ ಆರಂಭಿಕ ಆಟಗಾರ ಫಖರ್‌ ಝಮಾನ್‌ (Fakhar Zaman) ಅವರ ಔಟ್ ತೀರ್ಪಿನ ಕುರಿತ ವಿವಾದ ಶುರುವಾಗಿದೆ. ನಾಟೌಟ್ ಇದ್ದರೂ ಭಾರತದ ಪರ ತೀರ್ಪು ನೀಡಲಾಗಿದೆ ಅಂತ ಪಾಕಿಸ್ತಾನ ತಂಡ, ಅಂಪೈರ್ ವಿರುದ್ಧ ಆಕ್ರೋಶಗೊಂಡಿದೆ. ಪಾಕ್‌ ಅಭಿಮಾನಿಗಳು ಅದು ನಾಟೌಟ್‌ ಅಂತ ವಾದಿಸಿದ್ದು, ಫಖರ್ ಝಮಾನ್ ಕೂಡ ಅಂಪೈರ್‌ ತೀರ್ಪಿಗೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

ಭಾರತ ವಿರುದ್ಧ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ಆರಂಭದಲ್ಲೇ 2.3 ಓವರ್‌ಗಳಲ್ಲಿ 21 ರನ್‌ ಗಳಿಸಿದ್ದಾಗ ಫಖರ್‌ ವಿಕೆಟ್‌ ಕಳೆದುಕೊಂಡಿತು. 9 ಎಸೆತಗಳಲ್ಲಿ 15 ರನ್‌ ಸಿಡಿಸಿ ಝಮಾನ್‌ ಔಟಾದರು. ಹಾರ್ದಿಕ್ ಪಾಂಡ್ಯ ಎಸತದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಆದ್ರೆ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯುವಾಗ ಬಾಲ್ ನೆಲಕ್ಕೆ ಬಿದ್ದಿದೆ ಅನ್ನೋದು ಫಖರ್‌ ಝಮಾನ್‌ ಹಾಗೂ ಪಾಕ್‌ ಕ್ರಿಕೆಟಿಗರ ವಾದ. ಸಂಜು ಸ್ಯಾಮ್ಸನ್ ಕ್ಯಾಚ್ ಸರಿಯಾಗಿ ಸ್ವೀಕರಿಸಿರುವುದಾಗಿ ಖಚಿತಪಡಿಸಿದ್ದಾರೆ. ಕ್ಯಾಚ್ ಕುರಿತು ಸ್ಪಷ್ಟತೆ ಪಡೆಯಲು ಫೀಲ್ಡ್ ಅಂಪೈರ್ ಟಿವಿ ಅಂಪೈರ್ ಮೊರೆ ಹೋಗಿದರು. ಮೂರನೇ ಅಂಪೈರ್‌ ಕೂಡ ಹಲವು ಬಾರಿ ಪರಿಶೀಲಿಸಿ ಔಟ್‌ ಎಂದೇ ತೀರ್ಪು ನೀಡಿದರು.

ಟಿವಿ ಅಂಪೈರ್‌ ಔಟ್‌ ನೀಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಬಾಲ್ ನೆಲಕ್ಕೆ ಬಿದ್ದರೂ ಔಟ್ ತೀರ್ಪು ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಲೇ ಫಖರ್‌ ಝಮಾನ್‌ ಪೆವಿಲಿಯನ್‌ನಿಂದ ಹೊರ ನಡೆದರು. ಪೆವಿಲಿಯನ್‌ನಲ್ಲೂ ಕೋಚ್ ಮೈಕ್ ಹಸನ್ ಜೊತೆ ತಮ್ಮ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: Asia Cup 2025 | ಭಾರತದ ಬೆಂಕಿ ಆಟಕ್ಕೆ ಪಾಕ್‌ ಧೂಳಿಪಟ – ಸೂಪರ್‌ ಫೋರ್‌ನಲ್ಲಿ 6 ವಿಕೆಟ್‌ಗಳ ಅಮೋಘ ಜಯ

ಮತ್ತೆ ಸೋತು ಸುಣ್ಣವಾದ ಪಾಕ್‌
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸ ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171‌ ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಜಯ ಸಾಧಿಸಿತು.

Share This Article