66 ರನ್‍ಗಳಿಗೆ 7 ವಿಕೆಟ್ ಪತನ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಪಾಕ್ ತತ್ತರ

Public TV
2 Min Read

ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಎ ಗುಂಪಿನ ಇಂಡೋ ಪಾಕ್ ಕದನದಲ್ಲಿ ಭಾರತ ಬೌಲರ್ ಗಳು ಮಿಂಚು ಹರಿಸಿದ್ದು, ಪಾಕ್ ತಂಡವನ್ನು 162 ರನ್ ಗಳಿಗೆ ಆಲೌಟ್ ಮಾಡಲು ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ 3 ವಿಕೆಟ್‍ಗೆ 96 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ನಂತರ ಹಠಾತ್ ಕುಸಿತಗೊಂಡು 43.1 ಓವರ್ ಗಳಲ್ಲಿ 162 ರನ್ ಗಳಿಗೆ ಆಲೌಟ್ ಆಯ್ತು.

ಪಾಕಿಗೆ ಮೊದಲ ಆಘಾತ ನೀಡಿದ ಭುವನೇಶ್ವರ್ ಕುಮಾರ್ 3 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಇಮಾಮ್ ಹುಲ್ ಹಕ್, ಫಖರ್ ಜಮಾನ್ ವಿಕೆಟ್ ಪಡೆದು ಮಿಂಚಿದರು. ಬಳಿಕ ಬಂದ ಬಾಬರ್ ಅಜಮ್ 47 ರನ್ ಗಳಿಸಿದರೆ ಶೊಯೆಬ್ ಮಲಿಕ್ 43 ರನ್ ಗಳಿಸಿದರು. ಮೂರನೇ ವಿಕೆಟ್‍ಗೆ ಈ ಜೋಡಿ 82 ರನ್ ಜೊತೆಯಾಟ ನೀಡಿ ತಂಡದ ಚೇತರಿಕೆಗೆ ಕಾರಣರಾದರು. ಬಾಲ್ ಪಡೆದ ಕುಲ್‍ದೀಪ್ ಯಾದವ್ ಅರ್ಧ ಶತಕದ ಅಂಚಿನಲ್ಲಿದ್ದ ಬಾಬರ್ ಗೆ ಗೂಗ್ಲಿ ಎಸೆತದಲ್ಲಿ ಬೌಲ್ಡ್ ಮಾಡಿದರು. ಇತ್ತ ಉತ್ತಮ ಆಟವಾಡುತ್ತಿದ್ದ ಮಲಿಕ್ ಅನಗತ್ಯ ರನ್ ಕದಿಯಲು ಯತ್ನಿಸಿ ಅಂಬಟಿ ರಾಯುಡು ಕೈಲಿ ರನೌಟ್ ಆದರು.

ಮಿಂಚಿದ ಜಾದವ್: 24 ಓವರ್ ಗಳಲ್ಲಿ 96 ರನ್‍ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕ್ ತಂಡಕ್ಕೆ ಮುಳುವಾದ ಕೇದರ್ ಜಾದವ್ ನಾಯಕ ಸರ್ಫರಾಜ್, ಅಸಿಫ್ ಅಲಿ, ಶಾದಾಬ್ ಖಾನ್ ವಿಕೆಟ್ ಪಡೆದು ಮತ್ತೆ ಆಘಾತ ನೀಡಿದರು. ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ತಮ್ಮ ಮೊನಚಾದ ವಿಕೆಟ್ ಕೀಪಿಂಗ್ ಮೂಲಕ ಗಮನಸೆಳೆದರು.

ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಪಾಕ್ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಫಹೀಮ್ ಅಶ್ರಫ್ (18 ರನ್) ಬುಮ್ರಾ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಹಸನ್ ಅಲಿ (1 ರನ್), ಉಸ್ಮಾನ್ ಖಾನ್ (0 ರನ್) ಬಂದಷ್ಟೇ ವೇಗದಲ್ಲಿ (1 ರನ್) ನಿರ್ಗಮಿಸಿದರು. ಅಂತಿಮವಾಗಿ ಪಾಕ್ 162 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಇತ್ತ ಪಾಕ್ ವಿರುದ್ಧ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶವನ್ನು ನೀಡಿದ್ದರು ಕೂಡ ಹಲವು ಕ್ಯಾಚ್‍ಗಳನ್ನು ಕೈಚೆಲ್ಲುವ ಮೂಲಕ ಪಾಕ್ ತಂಡವನ್ನು ಇನ್ನಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಅವಕಾಶ ಕಳೆದುಕೊಂಡರು. ಭಾರತದ ಪರ ಭುವನೇಶ್ವರ್ ಕುಮಾರ್, ಜಾದವ್ ತಲಾ 3 ವಿಕೆಟ್ ಪಡೆದರೆ, ಬುಮ್ರಾ 2, ಕುಲ್‍ದೀಪ್ ಯಾದವ್ 1 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *