ದುಬೈ: ಅಭಿಷೇಕ್ ಶರ್ಮಾ (Abhishek Sharma) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಏಷ್ಯಾ ಕಪ್ (Asia Cup) ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ಭಾರತ (Team India) 6 ವಿಕೆಟ್ ನಷ್ಟಕ್ಕೆ 168 ರನ್ ಹೊಡೆದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತದ ಆರಂಭ ಉತ್ತಮವಾಗಿತ್ತು. ನಾಯಕ ಗಿಲ್ ಮತ್ತು ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 77 ರನ್ ಜೊತೆಯಾಟವಾಡಿದರು. ಗಿಲ್ 29 ರನ್(19 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟಾದರು.
And just like that, Abhishek Sharma reaches his fifty 🤯
Watch #INDvBAN LIVE NOW on the Sony Sports Network TV channels & Sony LIV.#SonySportsNetwork #DPWorldAsiaCup2025 pic.twitter.com/fP1RpHC0Eu
— Sony Sports Network (@SonySportsNetwk) September 24, 2025
ಗಿಲ್ ಔಟಾದ ಬೆನ್ನಲ್ಲೇ ಶಿವಂ ದುಬೆ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಎರಡು ವಿಕೆಟ್ ಪತನಗೊಂಡರೂ ಮತ್ತೊಂದು ಕಡೆ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟ್ ಬೀಸಿದರು. ಸಿಕ್ಸರ್ ಬೌಂಡರಿ ಸಿಡಿಸಿದ ಅಭಿಷೇಕ್ ಶರ್ಮಾ 75 ರನ್( 37 ಎಸೆತ, 6 ಬೌಂಡರಿ, 5 ಸಿಕ್ಸರ್) ರನೌಟ್ ಆದರು.
Pure Pandya Power 💪
Admire the mastery of Hardik Pandya 😍
Watch #INDvBAN LIVE NOW on the Sony Sports Network TV channels & Sony LIV.#SonySportsNetwork #DPWorldAsiaCup2025 pic.twitter.com/UoxkeXuNwQ
— Sony Sports Network (@SonySportsNetwk) September 24, 2025
ಅಭಿಷೇಕ್ ಶರ್ಮಾ ಔಟಾದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ 5ರನ್, ತಿಲಕ್ ವರ್ಮಾ 5 ರನ್ ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ 34 ಎಸೆತಗಳಲ್ಲಿ 39 ರನ್ ಹೊಡೆದರು. ಪಾಂಡ್ಯ 38 ರನ್(29 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರೆ ಅಕ್ಷರ್ ಪಟೇಲ್ ಔಟಾಗದೇ 10 ರನ್ ಹೊಡೆಯುವ ಮೂಲಕ ತಂಡದ ಮೊತ್ತವನ್ನು 160 ರನ್‌ಗಳ ಗಡಿ ದಾಟಿಸಿದರು. ಕೊನೆಯ 9 ಓವರ್‌ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 56 ರನ್ ಸಿಡಿಸಿದ ಪರಿಣಾಮ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.