– ಟೀಂ ಇಂಡಿಯಾಗೆ 58 ರನ್‌ಗಳ ಗುರಿ
ದುಬೈ: 2025 ರ ಏಷ್ಯಾಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಯುಎಇ 57 ರನ್‌ಗಳಿಗೆ ಆಲೌಟ್ ಆಯಿತು. ಟಿ20 ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆಯನ್ನು ಬರೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ 13.1 ಓವರ್‌ಗೆ ಕೇವಲ 57 ರನ್ ಗಳಿಸಿ ಆಲೌಟ್ ಆಗಿತು. ಅಲಿಶನ್ ಶರಾಫು 22, ಮಹಮ್ಮದ್ ವಾಸಿಮ್ 19 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರನು ಸಹ ಒಂದಂಕಿ ರನ್ ದಾಟಲಿಲ್ಲ.
ಟೀಂ ಇಂಡಿಯಾ ಪರ ಸ್ಪಿನ್ನರ್ ಕುಲ್ದೀಪ್ ಯಾದವ್ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು. ಕುಲ್ದೀಪ್ 4 ವಿಕೆಟ್ ಕಿತ್ತರು. ಶಿವಂ ದುಬೆ 3 ವಿಕೆಟ್ ಕಬಳಿಸಿದರು. ಜಸ್ಪ್ರಿತ್ ಬುಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಭಾರತ ಇನ್ನಿಂಗ್ಸ್‌ನಲ್ಲಿ ಬಿಟ್ಟುಕೊಟ್ಟ ಅತಿ ಕಡಿಮೆ ಮೊತ್ತ
ಯುಎಇ – ದುಬೈನಲ್ಲಿ 57 ಆಲೌಟ್ (2025)
ನ್ಯೂಜಿಲೆಂಡ್ – ಅಹಮದಾಬಾದ್‌ನಲ್ಲಿ 66 ಆಲೌಟ್ (2023)
ಐರ್ಲೆಂಡ್ – ಡಬ್ಲಿನ್‌ನಲ್ಲಿ 70 ಆಲೌಟ್ (2018)
ಇಂಗ್ಲೆಂಡ್ – ಕೊಲಂಬೊದಲ್ಲಿ 80 ಆಲೌಟ್ (2012)