Asia Cup 2023: ಮಳೆಗೆ ಜಯ, ಭಾರತ-ಪಾಕ್‌ ಪಂದ್ಯ ರದ್ದು – ಸೂಪರ್‌-4ಗೆ ಹಾರಿದ ಪಾಕ್‌

Public TV
3 Min Read

ಕ್ಯಾಂಡಿ: ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯುತ್ತಿದ್ದ ಇಂದಿನ ಏಷ್ಯಾಕಪ್‌ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾರೀ ಮಳೆಯಿಂದಾಗಿ ಫಲಿತಾಂಶವಿಲ್ಲದೇ ರದ್ದಾಗಿದೆ.

ಇದರಿಂದ ಇತ್ತಂಡಗಳು ಒಂದೊಂದು ಅಂಕ ಹಂಚಿಕೊಂಡಿದೆ. ಆದ್ರೆ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 238 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಪಾಕಿಸ್ತಾನ ತಂಡ 3 ಅಂಕಗಳೊಂದಿಗೆ ಸೂಪರ್‌ ಫೋರ್‌ ಹಂತಕ್ಕೆ ಜಿಗಿದಿದೆ. ಟೀಂ ಇಂಡಿಯಾ 1 ಅಂಕದೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಟೀಂ ಇಂಡಿಯಾ ಬ್ಯಾಟಿಂಗ್‌ ಬಳಿಕ ಎಡಬಿಡದೇ ಮಳೆ ಸುರಿಯತೊಡಗಿತು. 10 ಗಂಟೆಯೊಳಗೆ ಮಳೆ ನಿಂತರೇ ಡಕ್ವರ್ತ್‌ ಲೂಯಿಸ್‌ ನಿಯಮದಂತೆ ಓವರ್‌ ಕಡಿತಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ಮಳೆಯ ಆರ್ಭಟ ಮುಂದುವರಿದಿದ್ದರಿಂದ ಪಂದ್ಯವನ್ನ ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು. ಇದರ ಪ್ರಯೋಜನ ಪಡೆದ ಪಾಕಿಸ್ತಾನ 3 ಅಂಕಗಳೊಂದಿಗೆ ಸೂಪರ್‌ ಫೋರ್‌ಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಟೀಂ ಇಂಡಿಯಾ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ತೀವ್ರ ಆಘಾತ ಅನುಭವಿಸಿತು. 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸರ್ವಪತನ ಕಂಡು, ಎದುರಾಳಿ ಪಾಕಿಸ್ತಾನಕ್ಕೆ 267 ರನ್‌ಗಳ ಟಾರ್ಗೆಟ್‌ ನೀಡಿತ್ತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ರೋಹಿತ್‌ ಶರ್ಮಾ 22 ಎಸೆತಗಳಲ್ಲಿ 11 ರನ್‌ಗಳಿಸಿದ್ರೆ ಮಂದಗತಿಯ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ 30 ಎಸೆತಗಳಲ್ಲಿ ಕೇವಲ 10 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. ಈ ಬೆನ್ನಲ್ಲೇ ಭರವಸೆ ಆಟಗಾರ ವಿರಾಟ್‌ ಕೊಹ್ಲಿ ಸಹ 4 ರನ್‌ ಹಾಗೂ ಸ್ಫೋಟಕ ಆರಂಭ ನೀಡಿದ್ದ ಶ್ರೇಯಸ್‌ ಅಯ್ಯರ್‌ 14 ರನ್‌ ಗಳಿಗೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಬೃಹತ್‌ ಮೊತ್ತ ಕಲೆಹಾಕುವ ನೀರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಮೊದಲ 10 ಓವರ್‌ಗಳಲ್ಲೇ ಕೇವಲ 48 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. 15 ಓವರ್‌ಗಳಲ್ಲೀ ಕೇವಲ 74 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಗಿತ್ತು. ಟೀಂ ಇಂಡಿಯಾ 200 ರನ್‌ ಗಳಿಸುವುದೂ ಕಷ್ಟವೆಂದು ಭಾವಿಸಿದ್ದಾಗ ಹಾರ್ದಿಕ್‌ ಪಾಂಡ್ಯ ಹಾಗೂ ಇಶಾನ್‌ ಕಿಶಾನ್‌ ಜೊತೆಯಾಟದಿಂದ ಟೀಂ ಇಂಡಿಯಾಕ್ಕೆ ಬೂಸ್ಟರ್‌ ಡೋಸ್‌ ಸಿಕ್ಕಂತಾಯಿತು.

ಇಶಾನ್‌ ಕಿಶನ್‌-ಪಾಂಡ್ಯ ಪರಾಕ್ರಮ: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಯುವ ಆಟಗಾರ ಇಶಾನ್‌ ಕಿಶನ್‌ ಹಾಗೂ ಹಾರ್ದಿಕ್‌ ಪಾಂಡ್ಯ ನೆರವಿನಿಂದ ಟೀಂ ಇಂಡಿಯಾ 250 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿ 141 ಎಸೆತಗಳಲ್ಲಿ 138 ರನ್‌ ಗಳಿಸಿ ಚೇತರಿಕೆ ನೀಡಿತು. ಇಶಾನ್‌ ಕಿಶನ್‌ 82 ರನ್‌ (81 ಎಸೆತ, 9 ಬೌಂಡರಿ, 2 ಸಿಕ್ಸರ್‌), ಹಾರ್ದಿಕ್‌ ಪಾಂಡ್ಯ 87 ರನ್‌ (90 ಎಸೆತ, 7 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಕೊನೆಯಲ್ಲಿ ರವೀಂದ್ರ ಜಡೇಜಾ 14 ರನ್‌, ಶಾರ್ದೂಲ್‌ ಠಾಕೂರ್‌ 3 ರನ್‌, ಜಸ್ಪ್ರೀತ್‌ ಬುಮ್ರಾ 16 ರನ್‌, ಕುಲ್‌ದೀಪ್‌ ಯಾದವ್‌ 4 ರನ್‌, ಮೊಹಮ್ಮದ್‌ ಸಿರಾಜ್‌ 1 ರನ್‌ ಗಳಿಸಿದರು.

ಶಾಹೀನ್‌ ಶಾ ಬೌಲಿಂಗ್‌ ಮಿಂಚು: ಪಾಕ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಶಾಹೀನ್ ಶಾ ಆಫ್ರಿದಿ 4 ವಿಕೆಟ್‌ ಕಿತ್ತರೆ, ನಸೀಮ್‌ ಶಾ ಹಾಗೂ ಹ್ಯಾರಿಸ್‌ ರೌಫ್‌ ತಲಾ 3 ವಿಕೆಟ್‌ ಕಿತ್ತು ಮಿಂಚಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್