ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳಿದ್ದ ASI ಹೃದಯಾಘಾತದಿಂದ ಸಾವು

1 Min Read

ಚಾಮರಾಜನಗರ: ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಮರಳಿದ್ದ ಎಎಸ್‌ಐ (ASI) ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ (Chamarajanagar) ನಡೆದಿದೆ.

ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಾಗನಾಯಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಗನಾಯಕ ರಾತ್ರಿ ಡ್ಯೂಟಿ ಮುಗಿಸಿ ಬೆಳಗ್ಗೆ ಮನೆಗೆ ಬಂದಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ 158 ಪ್ರಯಾಣಿಕರಿದ್ದ ರೈಲಿನ 2 ಕೋಚ್‌ಗಳಿಗೆ ಬೆಂಕಿ – ಓರ್ವ ಸಾವು

ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಎಎಸ್‌ಐ ಕೊನೆಯುಸಿರೆಳೆದಿದ್ದಾರೆ. ನಗರದ ಪೊಲೀಸ್ ಗೃಹದಲ್ಲಿ ವಾಸವಿದ್ದ ಮನೆಯಲ್ಲಿ ಕುಸಿದು ಬಿದ್ದು ಎಎಸ್‌ಐ ನಾಗನಾಯಕ ಮೃತಪಟ್ಟಿದ್ದಾರೆ. ಇದನ್ನೂ ಓದಿ: Vijayapura | ಅಗ್ನಿ ಅವಘಡ – ಹೊತ್ತಿ ಉರಿದ ಹೋಟೆಲ್

 

 

Share This Article