BBK Season 12 | ಬಿಗ್‌ ಮನೆಯ ಫೈಯರ್‌ ಬ್ರ್ಯಾಂಡ್‌ ಅಶ್ವಿನಿ ಗೌಡಗೆ 3ನೇ ಸ್ಥಾನ!

1 Min Read

‘ಬಿಗ್ ಬಾಸ್ ಕನ್ನಡʼ 12ನೇ ಸೀಸನ್‌ ಕೊನೇ ಘಟ್ಟಕ್ಕೆ ಬಂದು ನಿಂತಿದೆ. ಬಿಗ್‌ ಮನೆಯ ಫೈಯರ್‌ ಬ್ರ್ಯಾಂಡ್‌ ಅಶ್ವಿನಿ ಗೌಡ 3ನೇ ಸ್ಥಾನ ಪಡೆದು ಹೊರಬಂದಿದ್ದಾರೆ.

ಈ ಕಾರ್ಯಕ್ರಮವನ್ನ ಸುದೀಪ್‌ ಅವರೇ ನಡೆಸಿಕೊಟ್ಟರು. ಸ್ಪರ್ಧಿಗಳ ಮುಂದೆ ಮೂರು ಲೈಟ್‌ ಬಾಕ್ಸ್‌ಗಳನ್ನ ಇರಿಸಲಾಗಿತ್ತು. ಮೂರು ಅದರ ಮೇಲೆ ನಿಂತಿದ್ದರು. ಮೂರು ಬಾಕ್ಸ್‌ನಲ್ಲಿ ರೆಡ್‌ ಗ್ರೀನ್‌, ರೆಡ್‌ ಗ್ರೀನ್‌ ಲೈಟ್‌ಗಳು ಬರುತ್ತಲೇ ಇರುತ್ತೆ. ಕೊನೆಯಲ್ಲಿ ಯಾರ ಬಾಕ್ಸ್‌ನಲ್ಲಿ ರೆಡ್‌ಲೈಟ್‌ ಇರುತ್ತೋ ಅವರು 3ನೇ ಸ್ಥಾನ ಎಂದು ಸುದೀಪ್‌ ಸೂಚಿಸಿದ್ದರು. ಅದರಂತೆ ಅಶ್ವಿನಿ ಗೌಡ ಅವರಿದ್ದ ಬಾಕ್ಸ್‌ನಲ್ಲಿ ರೆಡ್‌ ಲೈಟ್‌ ನಿಂತಿತ್ತು. ಹಾಗಾಗಿ ಅಶ್ವಿನಿಗೌಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಹೊರಬಂದರು.

ಬಿಗ್‌ ಬಾಸ್‌ ಮನೆಯೊಳಗೆ ಬಂದ ಕಿಚ್ಚ ಸುದೀಪ್‌ ದೇವರಿಗೆ ಕೈಮುಗಿದು ಸ್ಪರ್ಧಿಗಳ ಫೋಟೋ ಮೇಲೆ ಆಟೋಗ್ರಾಫ್‌ ಗೀಚಿದ್ರು. ನಂತ್ರ ಸ್ಪರ್ಧಿಗಳ ಇಷ್ಟು ದಿನದ ಅನುಭವ ಕೇಳಿದ್ರು. ಇದಾದಮೇಲೆ ಬಿಗ್‌ ಬಾಸ್‌ ಸ್ಪರ್ಧಿಗಳ ಮುಂದಿನ ಭವಿಷ್ಯ ಬಗ್ಗೆ ಹಾರೈಸಿದ್ರು. ಎರಡೂ ಕಡೆ ಪಟಾಕಿ ಸಿಡಿಸಲಾಯಿತು. ಬಳಿಕ ಬಿಗ್‌ ಬಾಸ್‌ 12ನೇ ಸೀಸನ್‌ ಇಲ್ಲಿಗೆ ಮುಗಿಯುತ್ತೆ ಎಂದು ಮನೆ ಲೈಟ್ಸ್‌ ಆಫ್‌ ಮಾಡಿದ್ರು. ಈ ವೇಳೆ ಸ್ಪರ್ಧಿಗಳು ಕಣ್ಣೀರಿಟ್ಟರು.

Share This Article