ನಟಿ/ಕನ್ನಡಪರ ಹೋರಾಟಗಾರ್ತಿಯಾಗಿರುವ ಅಶ್ವಿನಿ ಗೌಡ (Ashwini Gowda) ಇದೀಗ ಬಿಗ್‌ಬಾಸ್ (Bigg Boss Kannada 12) ಮನೆಯಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಸ್ಪರ್ಧಿ ಮ್ಯೂಟಂಟ್ ರಘು ತಮ್ಮನ್ನು ಅಶ್ವಿನಿ ಅಂತ ಕರೆದ್ರು ಅನ್ನೋ ಕಾರಣಕ್ಕೆ ಅಶ್ವಿನಿ ಗೌಡ ರೊಚ್ಚಿಗೆದ್ದಿದ್ದಾರೆ.
‘ಬನ್ನಿ ಅಶ್ವಿನಿ..ಕೆಲಸ ಮಾಡಬನ್ನಿ’ ಎಂದು ಕರೆದಿದ್ದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಅಶ್ವಿನಿ ಬಿಗ್‌ಬಾಸ್ ಮನೆಗೆ ಬಂದು ಸಮಾಜದಲ್ಲಿ ತಮ್ಮ ಸ್ಟೇಟಸ್‌ಗೆ ಧಕ್ಕೆಯಾಗಿದೆ ಎಂದು ಗೋಗರೆದಿದ್ದಾರೆ, ಅತ್ತಿದ್ದಾರೆ, ಊಟ ಬಿಟ್ಟಿದ್ದಾರೆ. ಮನೆಯಿಂದ ಹೊರಗೆ ಹೋಗೋದಾಗಿ ರಾದ್ಧಾಂತ ಮಾಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಕ್ಯಾಪ್ಟನ್ ಆಗಿದ್ದ ರಘು (Raghu) ತಮ್ಮನ್ನು ಏಕವಚನದಲ್ಲಿ ಕರೆದು ಅವಮಾನ ಮಾಡಿದ್ರು ಅನ್ನೋದಾಗಿ ಅಶ್ವಿನಿ ಬಿಗ್‌ಬಾಸ್ ಮನೆಯಲ್ಲಿ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಅಂದಹಾಗೆ ಅಶ್ವಿನಿಯವರನ್ನ ಅಶ್ವಿನಿ ಎಂದು ಬಿಗ್‌ಹೌಸ್‌ನಲ್ಲಿ ಸ್ಪರ್ಧಿ ರಘು ಕರೆಯುತ್ತಿದ್ದರು. ಆದರೆ ತಮ್ಮನ್ನು ಎಲ್ಲರೂ ಅಶ್ವಿನಿಯವರೇ ಎಂದು ಕರೆಯಬೇಕು ಎಂದು ಕಂಡೀಷನ್ ಹಾಕಿದ್ದಾರೆ. `ಬೇರೆ ಹೆಣ್ಮಕ್ಕಳನ್ನ ಹೇಗ್ ಬೇಕಾದ್ರೂ ಕರೀರಿ, ಅವ್ರು ವಿರೋಧ ಮಾಡಲ್ಲ ಅಂತ ನನಗೆ ಅವರಂತೆ ಕರೆಯಬೇಡಿ, ಸಮಾಜದಲ್ಲಿ ನನಗೆ ರೆಸ್ಪೆಕ್ಟ್ ಇದೆ, ಅಶ್ವಿನಿಯವರೇ ಅಂತ ಕರೆಯಬೇಕು’ ಎಂದು ರಘು ಮುಂದೆ ಹೇಳಿ ಅಬ್ಬರಿಸಿದ್ದಾರೆ.
ಹೀಗೆ ಅಶ್ವಿನಿ ಹಾಗೂ ರಘು ವಾಗ್ಯುದ್ಧ ವಿಕೋಪಕ್ಕೆ ತಿರುಗಿ ಹೋಗೆಲೇ… ಹೋಗಲೋ ಅನ್ನೋ ಮಟ್ಟಕ್ಕೆ ಜಗಳವಾಗಿದೆ. ಹೀಗೆ, ಅಶ್ವಿನಿಯವರು ತಮ್ಮನ್ನು ಅಶ್ವಿನಿಯವರೇ ಎಂದು ಕರೆಯಬೇಕು ಎಂಬ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಆಹಾರವಾಗುತ್ತಿದೆ. ಇದನ್ನೂ ಓದಿ: ಗೇಟ್ ಹತ್ತಿರ ಬಂದು ಮನೆಗೆ ಹೋಗ್ತೀನಿ ಅಂದ್ರೆ ಹೋಗಿ: ಅಶ್ವಿನಿ ಎದುರೇ ಟೇಬಲ್ ಮೇಲೆ ಕಾಲು ಹಾಕಿ ಗಿಲ್ಲಿ ಟಾಂಗ್

