ಕನ್ನಡ ಸಂಘಟನೆಗಳು ಬಂದ್ ಕರೆಯನ್ನು ಕೈಬಿಡಬೇಕು: ಅಶ್ವತ್ಥ ನಾರಾಯಣ

Public TV
1 Min Read

ಬೆಂಗಳೂರು: ಜನ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜನತೆಗೆ ಬಂದ್ ಮೂಲಕ ತೊಂದರೆ ಕೊಡುವುದು ಬೇಡ. ಕನ್ನಡ ಸಂಘಟನೆಗಳು ಬಂದ್ ಕರೆಯನ್ನು ಕೈಬಿಡಬೇಕು. ಸರ್ಕಾರ ನಿಮ್ಮ ಜೊತೆಗಿದೆ. ಹೀಗಿರುವಾಗ ಬಂದ್ ಕೈಬಿಟ್ಟು ಸಹಕರಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮನವಿ ಮಾಡಿದರು.

ನೆಲ, ಜಲ ವಿಷಯದಲ್ಲಿ ರಾಜಿ ಮಾಡಿಕೊಳ್ಳಲ್ಲ. ಹಿತ ಕಾಯಲು ಬದ್ಧರಾಗಿದ್ದೇವೆ. ಗಡಿ ತಂಟೆಗೆ ಬರುವವರು, ಧ್ವಜ ಸುಡುವವರು, ಶಾಂತಿ ಕದಡುವ ನಾಡದ್ರೋಹಿಗಳ ಮೇಲೆ ಗೂಂಡಾ ಕಾಯ್ದೆಯಡಿ, ನಾಡದ್ರೋಹದ ಕೇಸ್ ಹಾಕುತ್ತೇವೆ. ಮುಲಾಜು ಕೂಡ ತೋರಿಸಲ್ಲ ಎಂದರು. ಇದನ್ನೂ ಓದಿ: ಲುಧಿಯಾನ ಕೋರ್ಟ್ ಸ್ಫೋಟ – ಡ್ರಗ್ ಕೇಸ್‌ನಲ್ಲಿ ವಜಾಗೊಂಡಿದ್ದ ಪೊಲೀಸ್ ಅಧಿಕಾರಿಯೇ ಬಾಂಬರ್

ಎಂಇಎಸ್ ವಿಚಾರದಲ್ಲಿ ಸದನದಲ್ಲಿಯೇ ಸಿಎಂ ಸ್ಪಷ್ಟವಾಗಿ ಸಂದೇಶ ಕೊಟ್ಟಿದ್ದಾರೆ. ನಾಡಿನ ವಿಚಾರದಲ್ಲಿ ನಮ್ಮ ಭಾಷೆ, ನೆಲ, ಜಲ ಎಲ್ಲ ವಿಚಾರದಲ್ಲಿ ಕಾಂಪ್ರಮೈಸ್ ಆಗುವ ಪ್ರಶ್ನೆಯೇ ಇಲ್ಲ. ಯಾರೇ ಕಿಡಿಗೇಡಿಗಳು ಸಣ್ಣ ಕೃತ್ಯ ಮಾಡಿದರೂ ಅವರನ್ನು ಬಗ್ಗು ಬಡಿಯುತ್ತೇವೆ. ನಾಡಿನ ಹಿತರಕ್ಷಣೆ ಮಾಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡಪರ ಸಂಘಟನೆ ಬಂದ್ ಉಚಿತವೂ ಅಲ್ಲ, ಸೂಕ್ತವೂ ಅಲ್ಲ ಎಂದ ಹೇಳಿದರು

ಸರ್ಕಾರಕ್ಕೆ ಸಲಹೆ ಸೂಚನೆ ಕೊಡಲಿ, ಅವುಗಳನ್ನು ಪರಿಗಣಿಸುತ್ತೇವೆ. ಬಂದ್ ನಿಂದ ಜನ ಸಮಸ್ಯೆಗೆ ಸಿಲುಕುತ್ತಾರೆ. ಹೀಗಾಗಿ ಬಂದ್ ಬೇಕಿಲ್ಲ. ಸರ್ಕಾರ ಕನ್ನಡ ಸಂಘಟನೆಗಳ ಸಲಹೆಗಳಿಗೆ ಕಣ್ಣು ಕಿವಿಯಾಗಿದೆ. ಹೀಗಾಗಿ ಬಂದ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ 

ಸಿಎಂ ಜೊತೆ ಬಂದು ಮಾತನಾಡಿ, ನಿಮ್ಮ ಸಲಹೆಗಳಿಗೆ ಗೌರವಿಸುತ್ತೇವೆ. ಬಂದ್‍ಗೆ ಕರೆ ಕೊಟ್ಟಿದ್ದನ್ನು ಹಿಂಪಡೆಯಿರಿ. ಸರ್ಕಾರ ಕನ್ನಡ ಪರ ಸಂಘಟನೆ ಜೊತೆಗೆ ಮಾತುಕತೆಗೆ ಸಿದ್ಧವಿದೆ. ಈಗಾಗಲೇ ಬೆಳಗಾವಿ ಕೃತ್ಯದಲ್ಲಿ ಬಂಧಿಸಿದ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ. ಯಾವುದೇ ಸಂಘಟನೆ ಸಮಾಜಕ್ಕೆ ಕಂಟಕ ಆದರೂ ಅದಕ್ಕೆ ಅವಕಾಶ ಇಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *