ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್

By
1 Min Read

ಬೆಳಗಾವಿ: ಈಗ 9ನೇ ತರಗತಿವರೆಗೆ ಶಾಲೆಗಳನ್ನು ಬಂದ್ ಮಾಡಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಮುಂದೆ ಏನು ಕ್ರಮ ವಹಿಸಬೇಕು, ಅದನ್ನ ಸರ್ಕಾರ ವಹಿಸುತ್ತೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಓಮಿಕ್ರಾನ್ ವೇಗವಾಗಿ ಹರಡುವ ವೈರಸ್. ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ. ಅದಕ್ಕೆ ಪೂರ್ವಭಾವಿಯಾಗಿ ಸಣ್ಣ ಸಣ್ಣ ನಿರ್ಧಾರಗಳನ್ನ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!
LOCKDOWNಜೀವನಾಂಶಕ್ಕೆ ಸಮಸ್ಯೆ ಆಗಬಾರದು. ಬದುಕಿ ಬಾಳಲು ಅವಕಾಶ ಕೊಡಬೇಕು. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೇಸ್ ಹೆಚ್ಚುತ್ತಿರುವ ವಿಚಾರಕ್ಕೆ ಗಡಿಗಳನ್ನ ಬಂದ್ ಮಾಡಲು ಅವಕಾಶವಿಲ್ಲ. ನಿರ್ವಹಣೆ ಮಾಡಬಹುದು, ಟೆಸ್ಟಿಂಗ್ ಮಾಡಿ ಕಡಿವಾಣ ಹಾಕಬಹುದು ಎಂದರು.

ಡಿಕೆ ಬ್ರದರ್ಸಗೆ ಟಾಂಗ್!
ಬೆಳಗಾವಿ ಭಾಗದ ಜನರ ಧ್ವನಿಯಾಗಿ ನಾವು ಈಗಾಗಲೇ ಕೆಲಸ ಮಾಡುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡಿದ್ದೇವೆ ನೀವೇನು ಮಾಡಿದ್ದೀರಿ ಹೇಳ್ರಪ್ಪಾ. ಇಲ್ಲಿ ಬಂದು ಗಲಾಟೆ ಮಾಡುವಂತಿಲ್ಲ, ಪುಂಡಾಟಿಕೆ ಮಾಡುವಂತಿಲ್ಲ ಅಂತಾ ಕೇಳಿದ್ದೀವಿ. ಇದನ್ನ ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ಮಾಡಿದರು.

ಅವರು ಮನ ಬಂದಂತೆ ನಡೆದುಕೊಂಡು ಬಂದಿದ್ದಾರೆ. ಏನೂ ಮಾಡಿದ್ರೂ ನಾವು ಜಯಿಸಿಕೊಳ್ಳುತ್ತೇವೆ ಅನ್ನೋ ರೀತಿ ನಡೆದುಕೊಂಡಿದ್ದಾರೆ. ಆದರೆ ಈ ಮೂಲಕ ಒಂದು ಸ್ಪಷ್ಟ ಸಂದೇಶವನ್ನ ಕೊಡಬೇಕಾಗಿತ್ತು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಲಾಕ್‍ಡೌನ್ ಆಗಲು ಬಿಡ್ಬೇಡಿ – ಮಂತ್ರಾಲಯ ಶ್ರೀ ಮನವಿ

ಕೇವಲ ನಿಮ್ಮ ವರ್ಚಸ್ಸು, ಪ್ರತಿಷ್ಠೆ, ಸ್ವಾರ್ಥಕ್ಕೆ ಆದ್ಯತೆ ಕೊಟ್ಟು ಬದುಕಿ ಬಾಳುತ್ತಿದ್ದಂತವರು. ಇದು ಸಾಕಾಗಿದೆ. ನಿಮಗೆ ಸಾಧನೆ ಏನಾದ್ರೂ ಇದ್ರೇ ಕೆಲಸದಲ್ಲಿ ತೋರಿಸಬೇಕು. ನೀವು ಏನಾದ್ರೂ ಕೆಲಸ ಮಾಡಿದ್ದೀರಿ ಅಂತಾ ಕೇಳಿದ್ರೇ ಅವರಿಂದ ಉತ್ತರವಿಲ್ಲ ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *