ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

Public TV
1 Min Read

ಮಂಡ್ಯ: ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ ಎಂದು ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ (Ashwath Narayana) ಆಗ್ರಹಿಸಿದರು.

ಮದ್ದೂರು (Maddur) ಕಲ್ಲು ತೂರಾಟ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಪ್ರತಿಭಟಿಸಿದ ಹಿಂದೂಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ. ಪೊಲೀಸ್ ಇಲಾಖೆ ಸರ್ಕಾರದ ಓಲೈಕೆಗಷ್ಟೇ ಸೀಮಿತವಾಗಿದೆ. ಪೋಸ್ಟಿಂಗ್ ಸಲುವಾಗಿ ಪೊಲೀಸ್ ಇಲಾಖೆ ಓಲೈಕೆಗಿಳಿದಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳ್ಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸತ್ತು ಹೋಗಿದೆ, ಅಮಾಯಕರು ಬಲಿಯಾಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಸರ್ಕಾರದ ಓಲೈಕೆ ರಾಜಕಾರಣವೇ ಮದ್ದೂರು ಗಲಭೆಗೆ ಕಾರಣ: ಬಸವರಾಜ ಬೊಮ್ಮಾಯಿ ಕಿಡಿ

ಇನ್ನೂ ಅನ್ಯಧರ್ಮದ ವ್ಯಕ್ತಿಗಳು ಮತ್ತು ಸಮುದಾಯದವರು ಗಣೇಶೋತ್ಸವದ ಮೆರವಣಿಗೆ, ಹಿಂದೂ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು. ಇತರ ಧರ್ಮದ ಆಚರಣೆಗೆ ಗೌರವ ಕೊಡಬೇಕು, ಒಪ್ಕೋಬೇಕು. ನಾವು ಇರಾನ್, ಪಾಕಿಸ್ತಾನ, ಸೌದಿಯಲ್ಲಿಲ್ಲ. ಭಾರತದಲ್ಲಿದ್ದೇವೆ. ಭಾರತದ ಸಂಸ್ಕೃತಿ, ಆಚರಣೆಗೆ ಅವಕಾಶವೇ ಇಲ್ಲದಂತಾಗಿದೆ. ಇದು ಪದೇ ಪದೇ ಅತಿರೇಕಕ್ಕೆ ಹೋಗ್ತಿದೆ. ಮೊನ್ನೆ ಇದೇ ಸ್ಥಳದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಆಗ ಹಿಂದೂಗಳು ಕಲ್ಲೆಸೆದಿದ್ರಾ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನು ಕುಮ್ಮಕ್ಕು ಕೊಟ್ಟಿದ್ದೀವಿ? ನಿಮಗೆ ಬುದ್ಧಿ ಕೆಟ್ಟಿದೆಯಾ? ನೀವು ಹೇಗೆ ಈ ಥರ ಮಾತಾಡ್ತೀರಿ? ಗಣೇಶ ಹಬ್ಬಕ್ಕೆ ನಮ್ಮ ಕುಮ್ಮಕ್ಕೇನಿರುತ್ತೆ? ಚಲುವರಾಯಸ್ವಾಮಿ ದುರಹಂಕಾರದ ಮಾತುಗಳನ್ನು ಬಿಡಲಿ. ಮೂಲೆಗೆ ಸೇರಿದ್ರು ಈಗ ಮತ್ತೆ ಮೂಲೆಗೆ ಸೇರುತ್ತೀರಾ? ಈ ರೀತಿ ಅಹಂಕಾರದ ಮಾತು ಬಿಟ್ಟು ಜವಾಬ್ದಾರಿ ನಿಭಾಯಿಸಿ ಎಂದರು.ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ

Share This Article