ಶಿವಕುಮಾರ್‌ ನೀವು ಏನು ಸೂಪರ್‌ಮ್ಯಾನಾ: ಅಶ್ವಥ್ ನಾರಾಯಣ ವಾಗ್ದಾಳಿ

Public TV
1 Min Read

ಬೆಂಗಳೂರು: ಡಿಕೆ ಶಿವಕುಮಾರ್‌ (DK Shivakumar) ಏನು ಸೂಪರ್‌ಮ್ಯಾನಾ? ಬೆಂಗಳೂರಿಗೆ (Bengaluru) ಇವರಿಂದ ನಯಾ ಪೈಸೆ ಉಪಯೋಗ ಆಗುವುದಿಲ್ಲ ಎಂದು ಡಿಸಿಎಂ ಅಶ್ವಥ್‌ ನಾರಾಯಣ (Ashwath Narayana) ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರಿಗೆ ಪಾಪಾ ಜವಾಬ್ದಾರಿ ಒಂದಾ ಎರಡಾ? ಬ್ರ್ಯಾಂಡ್‌ ಬೆಂಗಳೂರಿಗೆ (Brand Bengaluru) ನಿಮ್ಮಿಂದ ಏನು ಆಗುವುದಿಲ್ಲ. ಬ್ರ್ಯಾಂಡ್‌ ಶಿವಕುಮಾರ್‌ ಅಂತಾ ಒಂದು ಎರಡು ತಿಂಗಳು ಓಡುತ್ತದೆ. ಆಮೇಲೆ ಠುಸ್ ಅಂತಾ ಕೆಳಗೆ ಬಿದ್ದು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.

 


ನಾನು ರಾಮನಗರಕ್ಕೆ (Ramangara) ಹೋದಾಗ ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಈಗ ನಾನು ಡಿಕೆ ಶಿವಕುಮಾರ್‌ಗೂ ಬೆಂಗಳೂರಿಗೂ ಏನು ಸಂಬಂಧ ಎಂದು ನಾನು ಕೇಳುತ್ತೇನೆ. ಡಿಕೆಶಿ ಅಂದ್ರೆ ದ್ವೇಷ, ಕಿರುಕುಳ. ಇವತ್ತು ನಾನು ಏನಾದರೂ ಹೇಳಿದ್ರೆ ದ್ವೇಷದಿಂದ ಹೇಳಿದ್ದೇನೆ ಅನ್ನಿಸಬಹುದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ನಳಿನ್‌ ಕುಮಾರ್ ಕಟೀಲ್

ಇವರಿಂದ ಗುಣಮಟ್ಟದ ಶಾಲೆ, ಗುಣಮಟ್ಟದ ಆರೋಗ್ಯ ಕೇಂದ್ರ ಮಾಡೋಕೆ ಸಾಧ್ಯವೇ? ನೀವು ಒಬ್ಬರು ರಿಯಲ್ ಎಸ್ಟೇಟ್ ವ್ಯಾಪಾರಸ್ಥರು. ನೀವು ಬೆಂಗಳೂರಿಗೆ ಬಂದು ಏನ್ ಮಾಡ್ತೀರಿ ಎಂದು ಪ್ರಶ್ನಿಸಿದರು.

Share This Article