ಅವಕಾಶ ಕೊಟ್ಟರೆ ನಾನೂ ಮಾಡ್ತೀನಿ: ವಿಪಕ್ಷ ನಾಯಕ ಸ್ಥಾನ ಆಕಾಂಕ್ಷೆ ಹೊರಹಾಕಿದ ಅಶ್ವಥ್ ನಾರಾಯಣ್

Public TV
2 Min Read

ಬೆಂಗಳೂರು: ನಮ್ಮಲ್ಲಿ ವಿರೋಧ ಪಕ್ಷದ ನಾಯಕನಾಗಲು (Opposition leader) ಯಾವುದೇ ಆಕಾಂಕ್ಷಿಗಳಿಲ್ಲ. ಹೈಕಮಾಂಡ್ ಹೇಳಿದವರಿಗೆ ಸ್ಥಾನ ಸಿಗಲಿದೆ. ಅವಕಾಶ ಕೊಟ್ಟರೆ ನಾನು ಮಾಡ್ತೀನಿ ಎಂದು ಪರೋಕ್ಷವಾಗಿ ವಿಪಕ್ಷ ಸ್ಥಾನದ ಆಕಾಂಕ್ಷೆಯನ್ನು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ನಮಗೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಜೆಂಟ್ ಇರಲಿಲ್ಲ. ಅಧಿವೇಶನ ಆರಂಭ ಆಗಲಿದೆ. ಹೀಗಾಗಿ ನಾಳೆಯೊಳಗೆ ವಿರೋಧ ಪಕ್ಷದ ನಾಯಕ ಘೋಷಣೆ ಆಗಲಿದೆ. ಹೈಕಮಾಂಡ್ ಅವಕಾಶ ಕೊಟ್ಟರೆ ನಾನು ಕೂಡಾ ಮಾಡುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ (Congress Guarantee) ಘೋಷಣೆ ಮಾಡಿ ಜನರ ಮತ ಪಡೆದು ಮಾತಿಗೆ ತಪ್ಪಿದೆ. ಗ್ಯಾರಂಟಿಗಳಿಗೆ ಕಂಡೀಶನ್ ಹಾಕಿ ದಿನಾಂಕಗಳನ್ನು ಮುಂದಕ್ಕೆ ಹಾಕ್ತಿದ್ದಾರೆ. ಕೇಂದ್ರ ಸರ್ಕಾರದ 5 ಕೆಜಿ ಸೇರಿ 10 ಕೆಜಿ ಅಂತ ಹೇಳಿರಲಿಲ್ಲ. ನಾವು 10 ಕೆಜಿ ಅಕ್ಕಿ ಕೊಡ್ತೀವಿ ಎಂದಿದ್ದರು. ಹೀಗಾಗಿ 10 ಕೆಜಿ ಅಕ್ಕಿ ಕೊಡಬೇಕು ಎಂದರು.

ಷರತ್ತು ರಹಿತವಾಗಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಬೇಕು. 200 ಯೂನಿಟ್ ಮೀರಿದರೆ ಚಾರ್ಜ್ ಹಾಕಲಿ. ಆದರೆ 10 ತಿಂಗಳ ಸರಾಸರಿ ಯೂನಿಟ್ ಬೇಡ. ಹೇಳಿದಂತೆ 200 ಯೂನಿಟ್ ಫ್ರೀ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜೆಪಿ ನಡ್ಡಾ ಅವ್ರು ದೆಹಲಿಗೆ ಬನ್ನಿ ಎಂದಿದ್ದಕ್ಕೆ ಹೋಗುತ್ತಿದ್ದೇನೆ: ಬಿಎಸ್‍ವೈ

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಯರಿಗೆ 2 ಸಾವಿರ ರೂ. ಕೊಡ್ತೀವಿ ಎಂದಿದ್ದರು. ಈಗ ಮನೆ ಯಜಮಾನಿಗೆ 2 ಸಾವಿರ ರೂ. ಎಂದು ಹೇಳಿ ಜಗಳ ತಂದು ಹಾಕಿದ್ದಾರೆ. ಎಲ್ಲ ಮಹಿಳೆರಿಗೂ 2 ಸಾವಿರ ರೂ. ಕೊಡಬೇಕು. ಎಲ್ಲವನ್ನೂ ಹೇಳಿದಂತೆ ಕೊಡಬೇಕು. ಇಲ್ಲದೇ ಹೋದರೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಗ್ಯಾರಂಟಿ ಭಾರದಲ್ಲಿ ಮುಳುಗಿ ಹೋಗಿದೆ. ಕಾಂಗ್ರೆಸ್ ಮೊದಲು ಈಜಲು ಶುರು ಮಾಡಲಿ. ‘ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ’ ಘೋಷವಾಕ್ಯದೊಂದಿಗೆ ಹೋರಾಟ ಮಾಡುತ್ತೇವೆ. ರೈತ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಸದನದ ಹೊರಗೆ ಹೋರಾಟ ಮಾಡುತ್ತೇವೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬೆಂಗಳೂರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್‌ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್