PRK ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರದಲ್ಲಿ ಆಶಿಕಾ ರಂಗನಾಥ್

Public TV
1 Min Read

ಸ್ಯಾಂಡಲ್‌ವುಡ್ ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಬೇಡಿಕೆಯ ನಡುವೆಯೇ ಪಿಆರ್‌ಕೆ ಪ್ರೊಡಕ್ಷನ್ಸ್ (PRK Productions) ನಿರ್ಮಾಣದ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ರಿಲೀಸ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಮೊದಲ ಬಾರಿಗೆ ಡಾಕ್ಟರ್ ಪಾತ್ರಕ್ಕೆ ಆಶಿಕಾ ಬಣ್ಣ ಹಚ್ಚಿದ್ದಾರೆ. ಮೆಡಿಕಲ್ ಥ್ರೀಲರ್ ’02’ ಸಿನಿಮಾದಲ್ಲಿ ಪಟಾಕಿ ಪೋರಿ ನಟಿಸಿದ್ದಾರೆ. ಆಶಿಕಾ ಜೊತೆ ಮುಖ್ಯಭೂಮಿಕೆಯಲ್ಲಿ ಮಲೆನಾಡಿನ ಪ್ರತಿಭೆ ಪ್ರವೀಣ್ ತೇಜ್ ನಟಿಸಿದ್ದಾರೆ.

 

View this post on Instagram

 

A post shared by Ashika Ranganath (@ashika_rangnath)

’02’ ಸಿನಿಮಾಗೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ. ಟೀಸರ್ ಪ್ರೀತಿ, ನೈತಿಕತೆ ಮತ್ತು ಹಣೆಬರಹದ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವ ವೈದ್ಯರ ಅಪಾಯಕಾರಿ ಪ್ರಯಾಣದ ಸುತ್ತ ಕೇಂದ್ರೀಕರಿಸಿ ಸಿನಿಮಾ ಮಾಡಲಾಗಿದೆ. ಇದೇ ಏಪ್ರಿಲ್‌ 19ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

ಈ ಚಿತ್ರದಲ್ಲಿ ಸಿರಿ ರವಿಕುಮಾರ್ (Siri Ravikumar), ಪುನೀತ್ ಬಿಎ, ಪ್ರಕಾಶ್ ಬೆಳವಾಡಿ, ಶ್ರೀಧರ್, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ರಂಗಭೂಮಿ ಕಲಾವಿದ ಮೋಹನ್ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣವಿದ್ದು, ವಿವನ್ ರಾಧಾಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

Share This Article