ಉಡುಪಿ ಕೃಷ್ಣ ಮಠಕ್ಕೆ ತಿರುವನಂತಪುರಂ ಬಿಜೆಪಿ ಉಪಮೇಯರ್ ಭೇಟಿ

1 Min Read

ಉಡುಪಿ: ತಿರುವನಂತಪುರಂನ ಬಿಜೆಪಿಯ ಉಪಮೇಯರ್ ಆಶಾ ನಾಥ್ (Asha Nath) ಅವರು ಉಡುಪಿ ಕೃಷ್ಣ ಮಠಕ್ಕೆ (Udupi Sri Krishna Matha) ಭೇಟಿ ನೀಡಿದ್ದಾರೆ.

- Advertisement -

ಇತ್ತೀಚೆಗಷ್ಟೇ ಬಿಜೆಪಿಯಿಂದ ಆಯ್ಕೆಯಾಗಿ ಆಶಾ ನಾಥ್ ದೇಶದ ಗಮನ ಸೆಳೆದಿದ್ದರು. ಕುಟುಂಬ ಸಮೇತರಾಗಿ ಬಂದು ಉಡುಪಿ ಕೃಷ್ಣ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಯಶವಂತಪುರದಲ್ಲಿ ಟೆಕ್ಸ್‌ಟೈಲ್ ಮಾರ್ಕೆಟ್, ಸಿಎಂ ಜೊತೆ ಚರ್ಚಿಸಿ ಶಂಕುಸ್ಥಾಪನೆ: ಶಿವಾನಂದ ಪಾಟೀಲ್

- Advertisement -

- Advertisement -

ತಿರುವನಂತಪುರದಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಕೃಷ್ಣ ದರ್ಶನದ ಬಳಿಕ ಪರ್ಯಾಯ ಮಠಾಧೀಶರನ್ನು ಉಪಮೇಯರ್ ಭೇಟಿಯಾದರು.

- Advertisement -

ಉಡುಪಿ ಶ್ರೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರೊಂದಿಗೆ ಮಾತುಕತೆ ನಡೆಸಿದರು. ಮಠದ ವತಿಯಿಂದ ನೂತನ ಉಪಮೇಯರಿಗೆ ಗೌರವ ಅರ್ಪಣೆ ಮಾಡಲಾಯಿತು. ಇದನ್ನೂ ಓದಿ: ಕೆಆರ್ ಮಾರುಕಟ್ಟೆ ವ್ಯಾಪಾರಿಗಳು ಥಂಡಾ – ಮೂಟೆಗಟ್ಟಲೇ ತರಕಾರಿಗಳು ಈಗ ಕಸದ ಗಾಡಿಗೆ!

Share This Article