ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ

Public TV
1 Min Read

ರಾಯಚೂರು: ನನಗೆ ಯಾವ ಶಕ್ತಿಯೂ ಕಾಡ್ತಿಲ್ಲ, ದೈವ ಶಕ್ತಿ ಹಾಗೂ ಜನಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಹೇಳಿದ್ದಾರೆ.

ರಾಯಚೂರು (Raichur) ಮಾರ್ಗದಲ್ಲಿ ಮಂತ್ರಾಲಯಕ್ಕೆ (Mantralayam) ಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕೆಲ ಶಕ್ತಿಗಳನ್ನು ದಮನ ಮಾಡಬೇಕು ಎಂದರೆ ದೇವರ ಹತ್ರ ಹೋಗಬೇಕಲ್ವ, ಆ ಕೆಲಸ ಮಾಡ್ತಿದಿನಿ. ನಾನು ದೇವಸ್ಥಾನಕ್ಕೆ ಸಾಮಾನ್ಯವಾಗಿ ಹೋಗುತ್ತೇನೆ. ಹಾಗಾಗಿ ಮಂತ್ರಾಲಯಕ್ಕೆ ಹೋಗಲು ಬಂದಿದ್ದೇನೆ. ಮೊನ್ನೆ ತಿರುಪತಿಗೆ ಹೋಗಿದ್ದೆ ನಮ್ಮ ತಂದೆ ಜೊತೆ. ಶೃಂಗೇರಿಗೂ ಹೋಗಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಲಂಚ ಪಡೆದು ಲಾಕ್ ಆದ ಅಧಿಕಾರಿ – ಲೋಕಾ ದಾಳಿ ವೇಳೆ ಅಸ್ವಸ್ಥಗೊಂಡ ಸಿಬ್ಬಂದಿ!

ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನನ್ನೂ ಹೇಳುವ ಶಕ್ತಿ ಇಲ್ಲ. ಕಾಂಗ್ರೆಸ್‍ಗೆ ರಾಜ್ಯದ ಜನತೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡ್ತಾರೆ ಅಂತ ನೋಡೋಣ, ಈಗಾಗ್ಲೆ ಐದನೇ ಗ್ಯಾರಂಟಿ, ಆರನೇ ಗ್ಯಾರಂಟಿ, ಏಳನೇ ಗ್ಯಾರಂಟಿ ಅಂತ ಹೇಳ್ತಿದ್ದಾರೆ. ಮಳೆಯಿಂದ ಬೆಳೆ ಹಲವೆಡೆ ನಾಶ ಆಗಿದೆ, ಸರ್ಕಾರ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ಲೆಕ್ಕಿಸದೇ ಕಾಂಗ್ರೆಸ್ ಸಮಾವೇಶ ನಡೆಸಿದೆ. ಈ ವಿಚಾರವನ್ನು ರಾಜ್ಯದ ಜನತೆಗೆ ಬಿಡ್ತೀವಿ, ಸರ್ಕಾರ ಎರಡು ವರ್ಷ ಏನು ಕೆಲಸ ಮಾಡಿದೆ ಅನ್ನೋದನ್ನ ರಾಜ್ಯದ ಜನತೆ ನಿರ್ಧಾರ ಮಾಡ್ತಾರೆ. ಕಾಲವೇ ಇದನ್ನೆಲ್ಲ ನಿರ್ಧರಿಸುತ್ತೆ. ಇನ್ನೂ, ಗೃಹಲಕ್ಷ್ಮೀ ಹಣದ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ ಹೇಳಿಕೆ ವಿಚಾರವಾಗಿ, ಅವರ ಬಗ್ಗೆ ರಿಯಾಕ್ಟ್ ಮಾಡೋಕೆ ನನ್ನಲ್ಲಿ ಶಕ್ತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

Share This Article