ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

Public TV
2 Min Read

ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ತನ್ನ ‘ಸೋದರ ಮಾವ’ ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಪರ ಪ್ರಚಾರಕ್ಕೆ ನಿಂತಿದ್ದಾರೆ.

Punjab polls: AAP's CM face Bhagwant Mann files nomination from Dhuri | Deccan Herald

ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಪುತ್ರಿ ಹರ್ಷಿತಾ ಅವರು ಶುಕ್ರವಾರ ಪಂಜಾಬ್‍ಗೆ ಭೇಟಿ ನೀಡಲಿದ್ದು, ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

ಈ ಕುರಿತು ಸುನೀತಾ ಅವರು ಟ್ವಟ್ಟರ್‌ನಲ್ಲಿ, ನಾಳೆ ನನ್ನ ಸೋದರ ಮಾವ ಭಗವಂತ್ ಮಾನ್ ಅವರಿಗೆ ಮತ ಕೇಳಲು ನಾನು, ನನ್ನ ಮಗಳೊಂದಿಗೆ ಧುರಿಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮಾನ್ ಅವರು 2022ರ ಪಂಜಾಬ್ ಚುನಾವಣೆಗೆ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದು, ಧುರಿಯಿಂದ ಸ್ಪರ್ಧಿಸಲಿದ್ದಾರೆ. ಇವರು ಸಂಗ್ರೂರ್‍ನಿಂದ ಎರಡು ಬಾರಿ ಸಂಸದರಾಗಿದ್ದಾರೆ.

ಕಳೆದ ತಿಂಗಳು ಕೇಜ್ರಿವಾಲ್ ಅವರು, ನಿಮ್ಮ ಸಿಎಂ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಫೋನ್ ನಂಬರ್ ಬಿಡುಗಡೆ ಮಾಡಿದ್ದರು. ಫೋನ್ ಮಾಡಿದ ಜನರಲ್ಲಿ 93% ಜನರು ಮಾನ್ ಅವರ ಹೆಸರನ್ನು ಸೂಚಿಸಿದ್ದರು. ಪರಿಣಾಮ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಂದಿನ ಸಿಎಂ ಆಭ್ಯರ್ಥಿಯಾಗಿ ಮಾನ್ ಅವರನ್ನು ಘೋಷಿಸಿದರು. ಈ ವೇಳೆ ಕೇಜ್ರಿವಾನ್ ಅವರು, ಎಎಪಿ ಪಂಜಾಬ್ ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ ಎಂದಿದ್ದರು.

ಸೋಮವಾರ ಈ ಕುರಿತು ಮಾತನಾಡಿದ ಮಾನ್ ಅವರು, ಪಂಜಾಬ್‍ನ ಜನರಿಂದ ಬೆಂಬಲ ಸಿಕ್ಕಿದ್ದು ಖುಷಿಯಾಗಿದೆ. ಈ ಮೂಲಕ ಜನರು ಕಾಂಗ್ರೆಸ್‍ಗೆ ಸೋಲಿನ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿಂದೆ ಫೆಬ್ರವರಿ 14 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಗುರು ರವಿದಾಸ್ ಜಯಂತಿ ಆಚರಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಪರಿಣಾಮ ಚುನಾವಣೆ ದಿನವನ್ನು ಮುಂದೂಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *