ಸದ್ಯದಲ್ಲೇ ಅರುಣ್ ರಾಜಕೀಯ ಪ್ರವೇಶ ಶತಸಿದ್ಧ – ಪುತ್ರನ ರಾಜಕೀಯ ಭವಿಷ್ಯ ನುಡಿದ ಸೋಮಣ್ಣ

Public TV
2 Min Read

– ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರೋಕ್ಷವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ ಕೇಂದ್ರ ಸಚಿವ

ಬೆಂಗಳೂರು: ತಮ್ಮ ಪುತ್ರ ಅರುಣ್ (Arun Somanna) ರಾಜಕೀಯ ಪ್ರವೇಶದ ಬಗ್ಗೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಸುಳಿವು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಅವರು, ಮುಂದಿನ ದಿನಗಳಲ್ಲಿ ಅರುಣ್ ರಾಜಕೀಯ ಪ್ರವೇಶ ಮಾಡುತ್ತಾರೆ. ಮುಂದೆ ಅವರಿಗೂ ಒಳ್ಳೆಯ ಭವಿಷ್ಯ ಸಿಗಲಿದೆ, ಅವರ ನಡವಳಿಕೆ ಅಷ್ಟು ಚೆನ್ನಾಗಿದೆ. ಅವರ ರಾಜಕೀಯ ಪ್ರವೇಶ ಆಗಿಯೇ ಆಗುತ್ತದೆ. ಬೆಂಗಳೂರೋ, ತುಮಕೂರೋ ಎಲ್ಲಿಂದ ರಾಜಕೀಯ ಪ್ರವೇಶ ಮಾಡುತ್ತಾರೆ ಗೊತ್ತಿಲ್ಲ. ಅದನ್ನೆಲ್ಲ ಪಕ್ಷ ಗಮನಿಸುತ್ತದೆ, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪುತ್ರನ ಹುಟ್ಟುಹಬ್ಬದ ದಿನವೇ ರಾಜಕೀಯ ಪ್ರವೇಶದ ಸಂದೇಶ ಕೊಟ್ಟರು. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಆಕಾಂಕ್ಷೆಯನ್ನು ಕೇಂದ್ರ ಸಚಿವ ವಿ ಸೋಮಣ್ಣ ಇದೇವೇಳೆ ಪರೋಕ್ಷವಾಗಿ ವ್ಯಕ್ತಪಡಿಸಿದರು. ಹೈಕಮಾಂಡ್‌ನವರಿಗೆ ಯಾರ‍್ಯಾರಿಗೆ ಯಾವ್ಯಾವ ಸ್ಥಾನ ಕೊಡಬೇಕು ಎಂದು ಗೊತ್ತಿದೆ. ಅಂಥ ಸಂದರ್ಭ ಬಂದಾಗ ವರಿಷ್ಠರು ಆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ವಿಷಯದಲ್ಲಿ ಯಾರ‍್ಯಾರು ಶಾಸಕರು ನನ್ನ ಪರ ಮಾತಾಡಿದ್ದಾರೋ ಅವರಿಗೆಲ್ಲ ನಾನು ಆಭಾರಿ ಆಗಿದ್ದೇನೆ. ಒಳ್ಳೆಯತನಕ್ಕೆ ಮಾತ್ರ ಬೆಲೆ ಸಿಗೋದು ಎಂದು ಹೇಳಿದರು. ಇದನ್ನೂ ಓದಿ: ಬೈರತಿ ಬಸವರಾಜ್ ವಿರುದ್ಧ ಕೊಲೆ ಕೇಸ್; ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ನಾಯಕರು

ಇನ್ನು ಎರಡು ಕಡೆ ಸೋತವನನ್ನು ಮೂರನೇ ಕಡೆ ಟಿಕೆಟ್ ಕೊಟ್ಟರು. ತುಮಕೂರು ಜನ ನನ್ನ ಕೈಹಿಡಿದ್ರು, ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ, ಜನರ ವಿಶ್ವಾಸಕ್ಕೆ ಋಣಿ. ಪಕ್ಷ ನಮ್ಮೆಲ್ಲರಿಗಿಂತ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಪ್ರಧಾನಿಯವರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದಲ್ಲಿ ಎಷ್ಟು ಬಣ ಇದೆಯೋ ಗೊತ್ತಿಲ್ಲ, ಯಾರೇ ಆಗಲೀ ನಾನೇ ಅನ್ನೋ ಮನಸ್ಥಿತಿ ಬಿಡಬೇಕು ಎಂದು ವಿಜಯೇಂದ್ರಗೆ (BY Vijayendra) ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಕೊಲೆ ಕೇಸಲ್ಲಿ ಮೂರೂವರೆ ಗಂಟೆ ಪೊಲೀಸರಿಂದ ಗ್ರಿಲ್ – ಹೊರ ಬರ್ತಿದ್ದಂತೆ ಬೆಂಬಲಿಗರಿಂದ ಜೈಕಾರ

ವಿಪಕ್ಷ ಶಾಸಕರಿಗೆ ಕಡಿಮೆ ಅನುದಾನ ಕೊಡುವ ಸರ್ಕಾರದ ನಡೆಗೆ ಸೋಮಣ್ಣ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ಶಾಸಕರಿಗೆ ಕಡಿಮೆ ಅನುದಾನ ಕೊಡುವಷ್ಟು ಸಣ್ಣತನ ತೋರಬಾರದು. ಸಿದ್ದರಾಮಯ್ಯ ತಮ್ಮ ನಿರ್ಣಯ ಪುನರ್ ಪರಿಶೀಲಿಸಲಿ, ಎಲ್ಲ ಶಾಸಕರಿಗೂ ಸಮಾನ ಅನುದಾನ ಕೊಡಲಿ, ಸಮಾನತೆ ಕಾಪಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

ಸಿದ್ದರಾಮಯ್ಯ (Siddaramaiah) ಕೀಳು ಮಟ್ಟದ ತೀರ್ಮಾನ ತೆಗೆದುಕೊಂಡಿದ್ದಾರೆ. ನಾನು ದೊಡ್ಡ ರಾಜಕಾರಣಿ, ಎರಡು ಸಲ ಸಿಎಂ ಆಗಿದ್ದೀನಿ ಎಂದು ಜಂಬ ಕೊಚ್ಕೊಳ್ಳೋದನ್ನ ಸಿಎಂ ಬಿಡಬೇಕು. ತಾವೂ ಕೂಡ ಪಕ್ಷಪಾತಿ, ಅಧಿಕಾರಕ್ಕೆ ಅಂಟಿ ಕೂರುವವ ಎಂದು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಖಜಾನೆ ಖಾಲಿ ಇದ್ದರೂ ಶಾಸಕರ ಮೂಗಿಗೆ ತುಪ್ಪ ಸವರಿದ್ದಾರೆ. ಎಲ್ಲ 224 ಶಾಸಕರ ಮೇಲೆ, ಜನರ ಮೇಲೆ ವಿಶ್ವಾಸ ಇರಲಿ. ಈ ಮೂಲಕ ಸಿದ್ದರಾಮಯ್ಯ ಖಳನಾಯಕ ಆಗಬಾರದು. ಸಿದ್ದರಾಮಯ್ಯನಂಥ ಬುದ್ಧಿವಂತರು ಅನುದಾನ ಕೊಡದಷ್ಟು ಸಣ್ಣತನ ತೋರಬಾರಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

Share This Article