ಬಾಗಲಕೋಟೆ: ಧವಸ-ಧಾನ್ಯ ಬಳಸಿ ಅಭಿಮಾನಿಯೊಬ್ಬರು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಚಿತ್ರವನ್ನು (Photo) ತಯಾರಿಸಿದ್ದಾರೆ.
ರಾಂಪುರ ಗ್ರಾಮದ ಚಿತ್ರ ಕಲಾವಿದರಾದ ಕೆಂಚಪ್ಪ ಬಡಿಗೇರ ಅವರು ಅಭಿಮಾನ ಮತ್ತು ಪ್ರೀತಿಯಿಂದ ನನ್ನ ಭಾವ ಚಿತ್ರವನ್ನು ಧವಸ-ಧಾನ್ಯಗಳಲ್ಲಿ ಅತ್ಯಂತ ಸೃಜನಾತ್ಮಕವಾಗಿ ರಚಿಸಿದ್ದಾರೆ. ಅವರ ಪ್ರೀತಿ ಮತ್ತು ಅಭಿಮಾನಕ್ಕೆ ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಮುಹೂರ್ತ ಫಿಕ್ಸ್
ಪೋಸ್ಟ್‌ನಲ್ಲಿ ಏನಿದೆ?
ಕಲಾ ಕ್ಷೇತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆದುಕೊಂಡಿರುವ ಇವರ ಏಕವ್ಯಕ್ತಿ ಹಾಗೂ ಗುಂಪು ಚಿತ್ರಕಲಾ ಪ್ರದರ್ಶನಗಳು, ಕಾರ್ಯಗಾರಗಳು, ಉತ್ಸವಗಳು ಹಾಗೂ ಅನೇಕ ಸಭೆ ಸಮಾರಂಭಗಳಲ್ಲಿ ಪ್ರದರ್ಶನಗೊಂಡಿದ್ದು ಹೆಮ್ಮೆಯ ವಿಷಯ. ಚಿತ್ರ ಹಾಗೂ ಶಿಲ್ಪ ಕಲೆಗಳಲ್ಲಿ ಎರಡರಲ್ಲೂ ಪರಿಣಿತಿ ಹೊಂದಿದ ಇವರು ಕಲ್ಲು, ಕಟ್ಟಿಗೆ, ಸಿಮೆಂಟ್, ಫೈಬರ್ , ಲೋಹಗಳು ಹಾಗೂ ಇತ್ಯಾದಿ ಮಾಧ್ಯಮಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ. ಶ್ರೀ ಕೆಂಚಪ್ಪ ಬಡಿಗೇರ ಅವರಿಗೆ ಶುಭಾಶಯ ಹಾಗೂ ಅಭಿನಂದನೆಗಳು.

