ಇಂದು ಬೆಂಗಳೂರಿಗೆ ಮೋದಿ – ಎಲ್ಲಿ ಸಂಚಾರ ನಿಷೇಧ? ಪರ್ಯಾಯ ಮಾರ್ಗ ಯಾವುದು?

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವ ಹಿನ್ನೆಲೆ ನಗರ ಹಲವು ರಸ್ತೆಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ನಗರ ಹಲವು ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಯಾವೆಲ್ಲಾ ರಸ್ತೆಗಳಿಗೆ ವಾಹನ ಸಂಚಾರ ನಿಷೇಧ ಮಾಡಲಾಗಿದೆ?
ಇಂದು ಮಧ್ಯಾಹ್ನ 12:30 ರಿಂದ 3:00 ಗಂಟೆಯವರೆಗೆ ಈ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಾಗಿದೆ ಎಂಬುವುದರ ಕುರಿತ ಮಾಹಿತಿ ಈ ಕೆಳಗಿನಂತಿದೆ.
* ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧ
* ನಾಗರಭಾವಿ ಸರ್ಕಲ್‍ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್‍ವರೆಗೆ ನಿಷೇಧ
* ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‍ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ನಿಷೇಧ
* ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ
* ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ

ಪರ್ಯಾಯ ರಸ್ತೆಗಳು ಎಲ್ಲಿ, ಎಲ್ಲಿ ಇರಬಹುದು?
* ನೈಸ್ ರಸ್ತೆ ಮುಖಾಂತರ ನೈಸ್ ಕಛೇರಿ – ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ – ಸೋಂಪುರ ಟೋಲ್ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಅವಕಾಶ
* ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ
* ಆರ್.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ
* ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ

ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು
* ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್‍ನಾಗ್ ಸರ್ಕಲ್ ನಿಂದ ರಾಬಿನ್ ಥಿಯೇಟರ್ ವರೆಗೆ
* ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್ ಬ್ಲಾಕ್ ಜಂಕ್ಷನ್ ವರೆಗೆ
* ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ

ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ
* ಕಾಳಿಕಾಂಭ ರಸ್ತೆ ಮತ್ತು ಪಾರ್ಕ್ ರಸ್ತೆ
* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ
* 6ನೇ ಮುಖ್ಯರಸ್ತೆ (ಕಾಳಿಕಾಂಭ ರಸ್ತೆ ಮತ್ತು ಪಾರ್ಕ್ ರಸ್ತೆ)
* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ವರೆಗೆ

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ. ಬೆಂಗಳೂರಿನ ಪೊಲೀಸರು ಅಲ್ಲೆ ಮುಕ್ಕಾಂ ಹೂಡಲಿದ್ದಾರೆ. ಅದರ ಜೊತೆಗೆ ಹೆಚ್ಚುವರಿ ಆಗಿ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *