‌ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆದಾಯಿತು, ನಾರ್ಕೋ ಅನಾಲಿಸಿಸ್‌ ಟೆಸ್ಟ್‌ ಮಾಡ್ಬೇಕು: ಗಿರೀಶ್‌ ಮಟ್ಟಣ್ಣನವರ್‌

Public TV
1 Min Read

ಮಂಗಳೂರು: ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆದಾಯಿತು ನಾನು ಸ್ವಾಗತಿಸುತ್ತೇನೆ. ಆತನಿಗೆ ನಾರ್ಕೋ ಆನಾಲಿಸಿಸ್‌ ಪರೀಕ್ಷೆ (Narco Analysis Test) ಮಾಡಬೇಕು ಎಂದು ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಷಡ್ಯಂತ್ರ ಏನೇ ಇದ್ದರೂ ಎಸ್‌ಐಟಿಯವರೇ ಉತ್ತರ ಕೊಡುತ್ತಾರೆ. ಅರೆಸ್ಟ್‌ ಆಗಿದ್ದು ಒಳ್ಳೆಯ ಬೆಳವಣಿಗೆ. ಎಸ್‌ಐಟಿ ಕರೆದರೆ ನನಗೆ ಮತ್ತು ಆತನಿಗೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ

ಸುಜಾತ ಭಟ್‌ ಅವರು ಅವರಿಗೆ ಆಗಿರುವ ಅನ್ಯಾಯವನ್ನು ಮೊದಲ ಬಾರಿಗೆ ಹೇಳಿದ್ದಾರೆ. ಯಾಕೆ ಮಾಧ್ಯಮಗಳು ಈ ವಿಚಾರವನ್ನು ಪ್ರಶ್ನೆ ಮಾಡುತ್ತಿಲ್ಲ. ಅರ್ಧ ಸತ್ಯವನ್ನು ಮಾತ್ರ ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.

Share This Article