ಶಾಸಕರನ್ನು ಬೆಂಗ್ಳೂರಿಗೆ ಕರೆತಂದ ಪೊಲೀಸರು!

Public TV
1 Min Read

ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಮಾರಾಣಾಂತಿಕ ಹಲ್ಲೆ ಪ್ರಕರಣದಲ್ಲಿ ಬಂಧನವಾಗಿದ್ದ ಶಾಸಕ ಕಂಪ್ಲಿ ಗಣೇಶ್ ಅವರನ್ನು ರಾಮನಗರ ಪೊಲೀಸರು ಅಹಮದಾಬಾದ್‍ನಿಂದ ಬೆಂಗಳೂರಿಗೆ ಕರೆತಂದಿದ್ದಾರೆ.

ಬೆಳಗ್ಗೆ 5:50ಕ್ಕೆ ಅಹಮಾದಾಬಾದ್‍ನಿಂದ ಹೊರಟ ಸ್ಪೈಸ್ ಜೆಟ್ ವಿಮಾನದಲ್ಲಿ ಕಂಪ್ಲಿ ಗಣೇಶ್ ಅವರನ್ನು ಬೆಂಗಳೂರಿಗೆ ಕರೆತರಲಾಯಿತು. ಬಳಿಕ ಏರ್ ಪೋರ್ಟ್‍ನಿಂದ ನೈಸ್ ರೋಡ್ ಮೂಲಕ ರಾಮನಗರ ಪೊಲೀಸರ ತಂಡ ಹಾಗೂ ಬಿಡದಿ ಠಾಣೆಯ ಎಸ್‍ಐ ಹರೀಶ್ ತಂಡದ ನೇತೃತ್ವದಲ್ಲಿ ಬೊಲೆರೋ ಜೀಪ್‍ನಲ್ಲಿ ಶಾಸಕರನ್ನು ಬಿಡದಿ ಠಾಣೆಗೆ ಕರೆದೊಯ್ಯಲಾಯಿತು.

ಆರೋಪಿ ಶಾಸಕರನ್ನು ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಅನುಮತಿ ನೀಡುವಂತೆ ಈಗಾಗಲೇ ಬಿಡದಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಮೊದಲು ಗಣೇಶ್ ಅವರ ಬಂಧನ ಪ್ರಕ್ರಿಯೆ ಮುಗಿಸಿ ಬಳಿಕ ಅವರ ಪ್ರಾಥಮಿಕ ಹೇಳಿಕೆಯನ್ನು ಪೊಲೀಸರು ಪಡೆಯಲಿದ್ದಾರೆ. ಇದನ್ನೂ ಓದಿ: ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಬರೋಬ್ಬರಿ ಒಂದು ತಿಂಗಳು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಶಾಸಕ ಗಣೇಶ್ ಅವರು ಬುಧವಾರ ಗುಜರಾತ್ ನ ಸೋಮನಾಥ ದೇವಾಲಯದ ಬಳಿ ಬಂಧನವಾಗಿದ್ದರು.

ಎಷ್ಟೇ ಹುಡುಕಾಟ ನಡೆಸಿದರೂ ಒಂದು ತಿಂಗಳಿನಿಂದ ಶಾಸಕ ಗಣೇಶ್ ಅವರು ಪತ್ತೆಯಾಗಿರಲಿಲ್ಲ. ಆದರೆ ಕಳೆದ ವಾರದ ಹಿಂದೆ ಗಣೇಶ್ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. ಈ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸ್ ತಂಡ ಬುಧವಾರ ಬೆಳಗ್ಗೆ 11.30ರ ವೇಳೆಗೆ ಶಾಸಕರನ್ನು ಬಂಧಿಸಿದೆ.

https://www.youtube.com/watch?v=SgEiX7OC5ak

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *