ಪೂನಂ ಅರೆಸ್ಟ್ ಮಾಡಿ: ‘ಬಾಯ್ಕಾಟ್‌ ಪಾಂಡೆ’ ಟ್ರೆಂಡ್ ಶುರು

Public TV
1 Min Read

ರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು (Poonam Pandey) ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್‌ ಪೂನಂ ಪಾಂಡೆ’ (Boycott) ಟ್ರೆಂಡ್ ಶುರು ಮಾಡಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಪೂನಂ ಪಾಂಡೆ ನಿಧನರಾಗಿದ್ದಾರೆ (Death) ಎಂದು ಈ ನಟಿಯ ಮ್ಯಾನೇಜರ್ ನಿನ್ನೆಯಷ್ಟೇ ಪೂನಂ ಅವರ ಅಧಿಕೃತ ಇನ್ಸ್ಟಾ ಪೇಜ್‌ನಲ್ಲಿ ಹಾಕಲಾಗಿತ್ತು. ಈ ಸುದ್ದಿ ಓದಿ ಅನೇಕರು ಶಾಕ್ ಆಗಿದ್ದರು. ಅದರಲ್ಲೂ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಆತಂಕಕ್ಕೀಡಾಗಿದ್ದರು.

ಇಂದು ಬೆಳಗ್ಗೆ ಅದೇ ಇನ್ಸ್ಟಾ ಪೇಜ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಪೂನಂ, ಇದೊಂದು ಜಾಗೃತಿಗಾಗಿ ಮಾಡಿರುವ ಗಿಮಿಕ್ ಎಂದು ಒಪ್ಪಿಕೊಂಡಿದ್ದಾರೆ. ಗಿಮಿಕ್ ಮಾಡಿ ಐಯಾಮ್ ಸಾರಿ ಎಂದೂ ಕೇಳಿದ್ದಾರೆ. ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪೂನಂ ವಿರುದ್ಧ ಕಾನೂನು ಕ್ರಮಕ್ಕೆ ಅನೇಕರು ಆಗ್ರಹ ಮಾಡಿದ್ದಾರೆ.

ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಜನರ ಭಾವನೆ ಜೊತೆ ಚೆಲ್ಲಾಟ ಆಡಬಾರದು. ಇದು ಗಂಭೀರ ವಿಚಾರ. ಜೊತೆಗೆ ಪೂನಂ ಪಾಂಡೆ ಸಾವಿನ ಸುಳ್ಳಿನಿಂದ ಇತರೆ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಮಹಿಳೆಯರು ಕೂಡ ಶಾಕ್‌ಗೆ ಒಳಗಾಗಿರುತ್ತಾರೆ. ಹೀಗಾಗಿ ಈ ರೀತಿ ಸುಳ್ಳು ಸುದ್ದಿ ಹರಡಿಸಿ ಗಿಮಿಕ್ ಮಾಡಿದ ಪೂನಂ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ ಅನೇಕರು.

 

ಕ್ಯಾನ್ಸರ್ ಬಗ್ಗೆ  ಜಾಗೃತಿಯನ್ನು ಅನೇಕ ಸಲಬ್ರಿಟಿಗಳು ಮೂಡಿಸ್ತಾರೆ. ಆದ್ರೇ ಈ ರೀತಿ ಸಾವಿನ ಸುಳ್ಳು ಸುದ್ದಿ ಹರಡಿಸಿ ಜಾಗೃತಿ ಮೂಡಿಸೋದು ಅಲ್ಲ. ಜಾಗೃತಿ ಮೂಡಿಸೋಕೆ ನಾನಾ ದಾರಿಗಳಿವೆ. ಆದರೆ, ಈ ರೀತಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.

Share This Article