ಕನಸಿನಂತೆ ಸೇನೆಗೆ ಸೇರಿ, ಸಮವಸ್ತ್ರದಲ್ಲೇ ಪ್ರೇಯಸಿಗೆ ಬೆಂಗ್ಳೂರು ಯೋಧನಿಂದ ಪ್ರಪೋಸ್!

Public TV
2 Min Read

ಚೆನ್ನೈ: ತನ್ನ ಕನಸಂತೆ ಸೇನೆಗೆ ಸೇರಿದ ಬೆಂಗಳೂರು ಮೂಲದ ಯೋಧರೊಬ್ಬರು ತನ್ನ ಪ್ರಿಯತಮೆಗೆ ಸಮವಸ್ತ್ರದಲ್ಲೇ ಪ್ರಪೋಸ್ ಮಾಡಿದ್ದು, ಸದ್ಯ ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 8 ರಂದು ಚೆನ್ನೈನ ರಜಪುತ್ ಸೇನಾ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದವರಿಗೆ ಬೀಳ್ಕೊಡುಗೆ ಆಯೋಜಿಸಲಾಗಿತ್ತು. ಈ ದಿನಕ್ಕಾಗಿ ಯುವ ಪ್ರೇಮಿಯೊಬ್ಬರು ಕಾತುರದಲ್ಲಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ತನ್ನ ಪ್ರೇಯಸಿ ಬಳಿಗೆ ಬಂದು ಮೊಣಕಾಲು ಊರಿ, ಆಕೆಯ ಕೈಗಳನ್ನು ಹಿಡಿದು ಪ್ರಪೋಸ್ ಮಾಡಿದ್ದಾರೆ.

ಈ ಪ್ರೀತಿಯ ಕಥಾ ನಾಯಕ ಬೆಂಗಳೂರು ಮೂಲದ ಠಾಕೂರ್ ಚಂದ್ರೇಶ್ ಸಿಂಗ್, ನಾಯಕಿ ಧಾರ ಮೆಹ್ತಾ. ಚಂದ್ರೇಶ್ ತಾವು ಅಂದುಕೊಂಡಂತೆ ಆರ್ಮಿಗೆ ಸೇರಿ, ಪ್ರೇಯಸಿಗೆ ಪ್ರೀತಿಯ ಪ್ರಸ್ತಾಪ ಸಲ್ಲಿಸಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಫೋಟೋಗಳನ್ನು ಇನ್‍ಸ್ಟಾಗ್ರಾಂ ಹರಿಬಿಡಲಾಗಿದ್ದು, ಯೋಧನ ಸಾಧನೆ ಬಗ್ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಪೋಷಕರನ್ನು ಕರೆದುಕೊಂಡು ಬರುವಂತೆ ಧಾರಗೆ ತಿಳಿಸಿದ್ದೆ ಎಂದು ಚಂದ್ರೇಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರೀತಿಯ ಹೆಜ್ಜೆ ಗುರುತುಗಳನ್ನು ತೆರೆದಿಟ್ಟಿದ್ದಾರೆ.

ಕಳೆದ ಮೂರುವರೆ ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೇವು. ಆದರೆ ಮೊದಲು ನಾನು ನನ್ನ ಕನಸನ್ನು ನನಸು ಮಾಡಬೇಕು ಎಂದು ನಿರ್ಧರಿಸಿದ್ದೆ ಎಂದು ಚಂದ್ರೇಶ್ ತನ್ನ ಸಾಧನೆಯನ್ನು ವಿವರಿಸಿದರು

ಪ್ರೀತಿ ಹುಟ್ಟಿದ್ದು ಹೇಗೆ?
ಚಂದ್ರೇಶ್ ಹಾಗೂ ಧಾರ ಬೆಂಗಳೂರಿನ ಸೆಂಟ್ ಜೋಸೆಫ್ ಕಲಾ ಹಾಗೂ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು. ಆದರೆ ಇಬ್ಬರ ವಿಷಯಗಳು ಬೇರೆ ಬೇರೆ ಆಗಿದ್ದರೂ ಹಿಂದಿ ತರಗತಿಯಲ್ಲಿ ಸೇರುತ್ತಿದ್ದರು. ಆರಂಭದ ಎರಡು ವರ್ಷಗಳ ಕಾಲ ಒಬ್ಬರಿಗೊಬ್ಬರು ಶುಭಕೋರುತ್ತಿದ್ದರು. ಆದರೆ ಮೂರನೇ ವರ್ಷಕ್ಕೆ ಒಂದಿಷ್ಟು ಬದಲಾವಣೆ ಕಂಡು ಪ್ರೀತಿಯ ಮೊಳಕೆ ಒಡೆದಿತ್ತು. ಆ ಒಂದು ವರ್ಷ ಹೆಚ್ಚಿನ ಸಮಯವನ್ನು ಇಬ್ಬರೇ ಸೇರಿ ಕಳೆಯುತ್ತಿದ್ದರು.

ತನ್ನ ಪ್ರೀತಿಯ ಪ್ರಸ್ತಾಪ ಮಾಡಲು ಉನ್ನತ ಹುದ್ದೆಗೆ ಸೇರಬೇಕು ಎನ್ನುವ ಉದ್ದೇಶವನ್ನು ಚಂದ್ರೇಶ್ ಹೊಂದಿದ್ದರು. ಹೀಗಾಗಿ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಮೊದಲ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ಧಾರ ಹಾಗೂ ಅವರ ಕುಟುಂಬದವರು ಚಂದ್ರೇಶ್ ಬೆಂಬಲಕ್ಕೆ ನಿಂತಿದ್ದರು.

“ನನ್ನ ಕಷ್ಟದ ದಿನಗಳಲ್ಲಿ ಪ್ರೇರಣೆ ತುಂಬಿ ಸಾಧನೆಗೆ ಸ್ಫೂರ್ತಿಯಾಗಿದ್ದು ಧಾರ ಹಾಗೂ ಅವರ ಕುಟುಂಬದವರು. ನನಗೆ ಆಗಲೇ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ ಎನ್ನುವುದು ಗೊತ್ತಾಯಿತು. ನಾನು ಕೂಡಾ ಧಾರಳ ಪ್ರೀತಿ ಹಾಗೂ ನಿಸ್ವಾರ್ಥ ಸ್ನೇಹಕ್ಕೆ ಫಿದಾ ಆಗಿದ್ದೆ. ಹೀಗಾಗಿ ನಾನು ಆಕೆಗೆ ಪ್ರಪೋಸ್ ಮಾಡಿದೆ” ಎಂದು ಚಂದ್ರೇಶ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.instagram.com/p/BnloC_ZA_XC/?taken-by=ssbcrackofficial

Share This Article
1 Comment

Leave a Reply

Your email address will not be published. Required fields are marked *