ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್

Public TV
1 Min Read

ಚಂಡೀಗಢ: ಪಂಜಾಬ್ (Punjab) ಸರ್ಕಾರ ರಾಜ್ಯದ ಕುಖ್ಯಾತ ಬಂದೂಕು ಸಂಸ್ಕೃತಿಗೆ (Gun Culture) ಕಡಿವಾಣ ಹಾಕಿದ್ದು, ಶಸ್ತ್ರಾಸ್ತ್ರ (Arms)ನಿಯಂತ್ರಣವನ್ನು ಬಿಗಿಗೊಳಿಸಿದೆ. ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಾರ್ವಜನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ನಿಷೇಧಿಸುವುದು ಸೇರಿದಂತೆ ಗನ್ ಮಾಲೀಕತ್ವ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಶಸ್ತ್ರಾಸ್ತ್ರಗಳು ಅಥವಾ ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು (Songs) ಕೂಡಾ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಮೂಲಗಳ ಪ್ರಕಾರ ಇದುವರೆಗೆ ನೀಡಲಾದ ಎಲ್ಲಾ ಶಸ್ತ್ರಾಸ್ತ್ರ ಪರವಾನಗಿಗಳನ್ನು ಮುಂದಿನ 3 ತಿಂಗಳೊಳಗೆ ಕೂಲಂಕುಷವಾಗಿ ಪರಿಶೀಲಿಸಲಾಗುವುದು. ಪರವಾನಗಿದಾರರಲ್ಲಿ ಶಸ್ತ್ರಾಸ್ತ್ರ ಹೊಂದಿರಲು ಜಿಲ್ಲಾಧಿಕಾರಿಗಳಿಗೆ ತೃಪ್ತಿದಾಯಕ ಕಾರಣಗಳು ಸಿಗಲಿಲ್ಲವೆಂದಾದರೆ ಹೊಸ ಪರವಾನಗಿಯನ್ನು ನೀಡಲಾಗುವುದಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಮಾನವನ ಜೀವನಕ್ಕೆ, ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಶಸ್ತ್ರಾಸ್ತ್ರಗಳನ್ನು ಅಜಾಗರೂಕರಾಗಿ ಬಳಕೆ ಮಾಡುವುದು ಅಥವಾ ಸಂಭ್ರಮಾಚರಣೆಯ ವೇಳೆ ಗುಂಡು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

ಭಗವಂತ್ ಮಾನ್ ಅವರು ಮೇ ತಿಂಗಳಿನಲ್ಲಿಯೇ ಹಾಡುಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಅಥವಾ ಹಿಂಸೆಯನ್ನು ವೈಭವೀಕರಿಸುವ ಗಾಯಕರಿಗೆ ಎಚ್ಚರಿಕೆ ನೀಡಿದ್ದರು. ಅಂತಹ ಪ್ರವೃತ್ತಿಯನ್ನು ಬೆಂಬಲಿಸುವುದಕ್ಕೆ ಅವರು ಅಸಮ್ಮತಿ ಸೂಚಿಸಿದರು. ಇಂತಹ ಕೆಲಸಗಳಲ್ಲಿ ಭಾಗಿಯಾಗುವವರೊಂದಿಗೆ ಕಠಿಣವಾಗಿ ವ್ಯವಹರಿಸಲಾಗುವುದು ಎಂದು ಹೇಳಿದ್ದರು.

ಇಂತಹ ಹಾಡುಗಳ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಬದಲು ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆಯ ಬಂಧಗಳನ್ನು ಬಲಪಡಿಸುವ ಮೂಲಕ ಪಂಜಾಬ್‌ನ ನೀತಿಗಳನ್ನು ಅನುಸರಿಸುವಂತೆ ಮಾನ್ ಗಾಯಕರಿಗೆ ಕರೆ ನೀಡಿದ್ದರು. ಇದನ್ನೂ ಓದಿ: ತನ್ನ ಹೆಂಡತಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿದ ಗಂಡ – ಮದುವೆನೂ ಮಾಡಿಸಿದ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *