ಗೆಳತಿಗೆ ರಿಂಗ್ ಹಾಕಿ ಲಿಪ್‌ಲಾಕ್ ಮಾಡಿದ ಸಿಂಗರ್ ಅರ್ಮಾನ್ ಮಲಿಕ್

Public TV
1 Min Read

‘ಮುಂಗಾರು ಮಳೆ 2′ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’ ಎಂದು ಹಾಡಿನ ಮೂಲಕ ಮೋಡಿ ಮಾಡಿರುವ ಅರ್ಮಾನ್ ಮಲಿಕ್ (Armaan Mallik) ಮತ್ತೆ ಸುದ್ದಿಯಲ್ಲಿದ್ದಾರೆ. ಗೆಳತಿ ಆಶ್ನಾಗೆ (Aashna Shroff) ರಿಂಗ್ ಹಾಕಿ ಲಿಪ್‌ಗೆ ಕಿಸ್ ಕೊಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಫಿಷಿಯಲ್ ಆಗಿ ರಿಂಗ್ ತೊಡಿಸಿರುವ ಬಗ್ಗೆ ಸಿಂಗರ್ ಅರ್ಮಾನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲಿ ಭಾವಿ ಪತ್ನಿಗೆ ರಿಂಗ್ ಹಾಕಿ, ಸಿಹಿ ಮುತ್ತು ಕೊಟ್ಟಿರುವ ಎಂಗೇಜ್‌ಮೆಂಟ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೊಸ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:‘ಮಗ್ಗಿ ಪುಸ್ತಕ’ದ ಫಸ್ಟ್ ಲುಕ್ ಲಾಂಚ್ ಮಾಡಿದ ಯದುವೀರ ಒಡೆಯರ್

ಕೆಲ ತಿಂಗಳುಗಳ ಹಿಂದೆ ಗೆಳತಿ ಆಶ್ನಾಗೆ ಪ್ರಪೋಸ್ ಮಾಡುತ್ತಿರುವ ಫೋಟೋಗಳನ್ನ ಶೇರ್ ಮಾಡಿ ರಿಲೇಷನ್‌ಶಿಪ್ ಬಗ್ಗೆ ಅರ್ಮಾನ್ ತಿಳಿಸಿದ್ದರು. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕದ್ದು ಮುಚ್ಚಿ ನಿಶ್ಚಿತಾರ್ಥ: ದೀಪಿಕಾ-ರಣವೀರ್ ಸ್ಪೋಟಕ ಹೇಳಿಕೆ

ಅರ್ಮಾನ್ ಮಲಿಕ್ ಬಹುಭಾಷೆಗಳಲ್ಲಿ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದಾರೆ. ಮುಂಗಾರು ಮಳೆ 2, ಸಿದ್ಧಾರ್ಥ್, ಯುವರತ್ನ, ಬಾನದಾರಿಯಲಿ, ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್