ಉಪ್ಪಿ ಅಣ್ಣನ ಮಗ ನಿರಂಜನ್‌ಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

Public TV
1 Min Read

ಟ, ನಿರ್ದೇಶಕ, ನಿರ್ಮಾಪಕ ಅರ್ಜುನ್ ಸರ್ಜಾ (Arjun Sarja) ಅವರು 13ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದ್ದಕ್ಕೆ ಸಜ್ಜಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ನಿರಂಜನ್‌ರನ್ನು ತೆಲುಗಿನಲ್ಲಿ ಲಾಂಚ್ ಮಾಡೋಕೆ ಮುಂದಿದ್ದಾರೆ.‌ ಇದನ್ನೂ ಓದಿ:ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

‘ಪ್ರೇಮ ಬರಹ’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡಿರುವ ಅರ್ಜುನ್ ಸರ್ಜಾ ಈ ಬಾರಿ ವಿಭಿನ್ನವಾಗಿರುವ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ನಿರಂಜನ್ ಸುಧೀಂದ್ರ (Niranjan Sudhendra), ಪುತ್ರಿ ಐಶ್ವರ್ಯಾ ಸರ್ಜಾ (Aishwarya Sarja) ಈ ಇಬ್ಬರನ್ನು ಜೋಡಿಯಾಗಿ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ.

ಅ.16ರಂದು ಬೆಳಗ್ಗೆ 10:08ಕ್ಕೆ ಟೈಟಲ್ ಅನಾವರಣ ಆಗಲಿದೆ ಎಂದು ಸಿನಿಮಾ ಕುರಿತು ಅರ್ಜುನ್ ಸರ್ಜಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಸಿನಿಮಾ ತೆಲುಗು, ತಮಿಳು, ಕನ್ನಡ ಮೂರು ಭಾಷೆಯಲ್ಲೂ ಮೂಡಿ ಬರಲಿದೆ.

ಸದ್ಯ ಅರ್ಜುನ್ ಸರ್ಜಾ ಅವರು ತೆಮಿಳಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ನಿರ್ದೇಶನ ಮಾಡೋದ್ದಕ್ಕೂ ತಯಾರಿ ಮಾಡಿಕೊಂಡಿದ್ದಾರೆ. ಯಾವಾಗ ಶೂಟಿಂಗ್ ಶುರುವಾಗಲಿದೆ, ಪಾತ್ರ ವರ್ಗದ ಕುರಿತು ನಾಳೆ (ಅ.16) ಮಾಹಿತಿ ಸಿಗಲಿದೆ.

Share This Article