51ನೇ ವಯಸ್ಸಿಗೆ 2ನೇ ಮಗುವಿಗೆ ತಂದೆಯಾದ ‘ಓಂ ಶಾಂತಿ ಓಂ’ ನಟ

Public TV
1 Min Read

ಬಾಲಿವುಡ್ ನಟ, ವಿಲನ್ ಆಗಿ ಗಮನ ಸೆಳೆದ ‘ಓಂ ಶಾಂತಿ ಓಂ’ (Om Shanti Om) ಖ್ಯಾತಿಯ ಅರ್ಜುನ್ ರಾಮ್‌ಪಾಲ್ (Arjun Rampal) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅರ್ಜುನ್ ಗರ್ಲ್‌ಫ್ರೆಂಡ್ ಗೇಬ್ರಿಯೆಲಾ (Gabriella) ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.‌ 51 ನೇ ವಯಸ್ಸಿಗೆ ಅರ್ಜುನ್‌ ರಾಮ್‌ಪಾಲ್‌ ತಂದೆಯಾಗಿದ್ದಾರೆ.

2001ರಲ್ಲಿ ‘ಪ್ಯಾರ್ ಇಷ್ಕ್ ಮೊಹಬ್ಬತ್’ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಅರ್ಜುನ್ ರಾಮ್‌ಪಾಲ್, ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್(Sharukh Khan), ದೀಪಿಕಾ ಪಡುಕೋಣೆ, ನಟನೆಯ ‘ಓಂ ಶಾಂತಿ ಓಂ’ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಪೋಷಕ ಪಾತ್ರಗಳ ಜೊತೆ ಯಾವುದೇ ಪಾತ್ರವಾಗಿದ್ರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದೀಗ ಮನೆಗೆ ಹೊಸ ಅತಿಥಿಯ ಆಗಮನವಾಗಿರೋದರ ಬಗ್ಗೆ ನಟ ಅರ್ಜುನ್ ರಾಮ್‌ಪಾಲ್ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಗಂಡು ಮಗವಿನ ಆಗಮನದಿಂದ ನನ್ನ ಕುಟುಂಬಕ್ಕೆ ಖುಷಿ ಕೊಟ್ಟಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ನಟ ತಿಳಿಸಿದ್ದಾರೆ. ಜುಲೈ 20ಕ್ಕೆ ಅರ್ಜುನ್, ಗರ್ಲ್‌ಫ್ರೆಂಡ್ ಗೇಬ್ರಿಯೆಲಾ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ ಎಂದು ನಟ ಹೇಳಿದ್ದಾರೆ. ಇದನ್ನೂ ಓದಿ:ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ

ಅರ್ಜುನ್ ರಾಮ್‌ಪಾಲ್- ಗೇಬ್ರಿಯೆಲಾ ಅವರು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಈ ಜೋಡಿಗೆ ಈಗಾಗಲೇ ಒಂದು ಮಗುವಿದ್ದು, ಈಗ ಮನೆಗೆ 2ನೇ ಮಗುವಿನ ಎಂಟ್ರಿಯಾಗಿದೆ. ಒಟ್ನಲ್ಲಿ ಈ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್