ಜರ್ಮನಿಯಲ್ಲಿ ಅರ್ಜುನ್, ಮಲೈಕಾ ರೊಮ್ಯಾಂಟಿಕ್ ಡೇಟ್- ಮದುವೆ ಯಾವಾಗ ಎಂದ ನೆಟ್ಟಿಗರು

Public TV
1 Min Read

ಬಾಲಿವುಡ್‌ನ ಮುದ್ದಾದ ಜೋಡಿ ಅರ್ಜುನ್ ಕಪೂರ್- ನಟಿ ಮಲೈಕಾ ಅರೋರಾ (Malaika Arora)  ಸದ್ಯ ಜರ್ಮನಿಯಲ್ಲಿ (Germany) ರೊಮ್ಯಾಂಟಿಕ್ ಆಗಿ ಡೇಟ್ ಮಾಡ್ತಿದ್ದಾರೆ. ಈ ಜೋಡಿಯ ಚೆಂದದ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Malaika Arora (@malaikaaroraofficial)

ನಟ ಅರ್ಜುನ್ ಕಪೂರ್ (Arjun Kapoor) ಅವರು ಸಿನಿಮಾಗಿಂತ ಮಲೈಕಾ ಅರೋರಾ ಜೊತೆಗಿನ ಲವ್ ರಿಲೇಷನ್‌ಶಿಪ್ ವಿಚಾರವಾಗಿಯೇ ಸಖತ್ ಫೇಮಸ್ ಆಗಿದ್ದಾರೆ. ಈ ಜೋಡಿಯ ಲವ್ವಿ- ಡವ್ವಿ ಕಥೆ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಸದ್ಯ ಅರ್ಜುನ್- ಮಲೈಕಾ ವಿದೇಶಕ್ಕೆ ಹಾರಿದ್ದಾರೆ.

 

View this post on Instagram

 

A post shared by Malaika Arora (@malaikaaroraofficial)

ಜರ್ಮನಿಯ ಸ್ಕಾಟ್ಲೆಂಡ್‌ನ ಸುಂದರ ಪ್ರದೇಶದಲ್ಲಿ ಕ್ಲಿಕ್ಕಿಸಿರುವ ಫೋಟೋವನ್ನ ಮಲೈಕಾ ಅರೋರಾ ಶೇರ್ ಮಾಡಿದ್ದಾರೆ. ಈ ಜೋಡಿಯ ರೊಮ್ಯಾಂಟಿಕ್ ಪೋಸ್‌ಗೆ ಫ್ಯಾನ್ಸ್ ಭರ್ಜರಿ ಲೈಕ್ಸ್- ಕಾಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ:ಯಶ್ ಕಾಲ್ ಮಾಡಿ ಕೆಜಿಎಫ್- 3ಗೆ ರೆಡಿಯಾಗಿ ಅಂದ್ರು- ನಟಿ ರವೀನಾ ಟಂಡನ್

ಮಲೈಕಾ ಅರೋರಾ ಫೋಟೋ ಶೇರ್ ಮಾಡ್ತಿದ್ದಂತೆ, ನಿಮ್ಮಿಬ್ಬರ ಮದುವೆ ಯಾವಾಗ? ಪ್ರೀ ಹನಿಮೂನ್‌ನಲ್ಲಿ ಬ್ಯುಸಿ ನಾ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ.

Share This Article