ಆಸ್ತಿ ವಿಚಾರಕ್ಕೆ ಗಲಾಟೆ – ಬೈಕ್ ಅಡ್ಡಗಟ್ಟಿ ಚಿಕ್ಕಪ್ಪನನ್ನೇ ಪೆಟ್ರೋಲ್ ಸುರಿದು ಸುಟ್ಟ ಮಗ

Public TV
1 Min Read

ಶಿವಮೊಗ್ಗ: ಬೈಕ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಆತನ ಅಣ್ಣ ಹಾಗೂ ಮಗ ಸೇರಿಕೊಂಡು ಅಡ್ಡಗಟ್ಟಿ ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಅದೇ ಗ್ರಾಮದ ಮಹೇಶಪ್ಪ (60) ಎಂದು ಗುರುತಿಸಲಾಗಿದೆ. ಆತ ಬೆಳಲಕಟ್ಟೆಯಿಂದ ಬಿಕ್ಕೋನಹಳ್ಳಿಯ ತನ್ನ ಮಗಳ ಮನೆಗೆ ಹೋಗುತ್ತಿದ್ದ. ಈ ವೇಳೆ ಆತನನ್ನು ಅಡ್ಡ ಹಾಕಿದ ಸಹೋದರ ಕುಮಾರ್ ಹಾಗೂ ಆತನ ಮಗ ಕಾರ್ತಿಕ್ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಗಾಯಗೊಂಡು ನೆಲದ ಮೇಲೆ ನರಳಾಡುತ್ತಿದ್ದ ಮಹೇಶಪ್ಪನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಮಹೇಶಪ್ಪನ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಚುನಾವಣಾ ಫಲಿತಾಂಶದ ಬಗ್ಗೆ INDIA ಒಕ್ಕೂಟ ಇವಿಎಂ ಮಷಿನ್‌ಗಳನ್ನು ದೂರಿದರೆ ಆಶ್ಚರ್ಯವಿಲ್ಲ: ಅಜಿತ್ ಪವಾರ್

ಆಸ್ತಿ ಮಾರಾಟದ ವಿಚಾರಕ್ಕಾಗಿ ಅಣ್ಣ ಹಾಗೂ ತಮ್ಮನ ನಡುವೆ ಕಳೆದ ವರ್ಷದಿಂದ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಈ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆಯ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು (Police) ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ (Shivamogga) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ: ಸಂಸದ ಮುನಿಸ್ವಾಮಿ

Share This Article