ರಾಮನಗರಕ್ಕೂ ಸಚಿವರಿಗೂ ಏನು ಸಂಬಂಧ? – ಡಿಕೆಶಿ ಪ್ರಶ್ನೆಗೆ ಉತ್ತರ ನೀಡಿದ ಅಶ್ವಥ್‌ ನಾರಾಯಣ್‌

Public TV
2 Min Read

ಬೆಂಗಳೂರು: ಮಿಸ್ಟರ್‌ ಡಿಕೆ ಶಿವಕುಮಾರ್‌, ಗೂಂಡಾಗಿರಿ ಬಿಡಿ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ್‌ ತಿರುಗೇಟು ನೀಡಿದ್ದಾರೆ.

ರಾಮನಗರಕ್ಕೂ ನನಗೂ ಏನು ಸಂಬಂಧ ಎಂದು ಕೇಳುವ ಡಿಕೆ ಶಿವಕುಮಾರ್‌ ಅವರ ಪ್ರಶ್ನೆಗೆ ಚಿಕ್ಕಕಲ್ಯ ನಾರಾಯಣಪ್ಪ ಅಶ್ವಥ್‌ ನಾರಾಯಣ್‌ ಎಂಬ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಿದೆ ಎಂದು ಹೇಳಿದ್ದಾರೆ. ಸೋಮವಾರ ನಡೆದ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ಅಶ್ವಥ್‌ ನಾರಾಯಣ್‌ ವ್ಯಕ್ತಪಡಿಸಿದ್ದಾರೆ

ಸಚಿವರು ಹೇಳಿದ್ದು ಏನು?
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಹೇಳಿರುವಂತೆ ಡಿಕೆ ಬ್ರದರ್ಸ್‌ಗಳಿಗೆ ಅಭದ್ರತೆ ಕಾಡುತ್ತಿದೆ. ಗೂಂಡಾಗಳನ್ನು ಕಟ್ಟಿ ಮೆರೆದವರನ್ನು ಮರೆಯಾಗಿಸುವ ಕಲೆ ನಮ್ಮ ರಾಮನಗರದ ಜನತೆಗೆ ಗೊತ್ತಿದೆ. ಇಲ್ಲಿ ಅಭಿವೃದ್ಧಿಗೆ ಮಾತ್ರ ಬೆಲೆ. ಹಾದಿ ತಪ್ಪಿದ ರಾಜಕಾರಣಿಗಳಿಂದ ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವುದು ಬೇಡ. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ

ಕಾರ್ಯಕ್ರಮದಲ್ಲಿ ಡಿಕೆ ಸುರೇಶ್‌ ಮತ್ತವರ ಗ್ಯಾಂಗ್‌ ತೋರಿದ ಗೂಂಡಾ ವರ್ತನೆ ಹಾಗೂ ಅದನ್ನು ಡಿಕೆ ಶಿವಕುಮಾರ್‌ ಸಮರ್ಥಿಸಿಕೊಂಡ ರೀತಿ ಕಾಂಗ್ರೆಸ್‌ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿಯ ಪುಂಡಾಟಿಕೆ ಡಿಕೆ ಬ್ರದರ್ಸ್‌ಗಳು ಕಲಿತು ಬಂದ ಕಲೆ. ರಾಮನಗರದಲ್ಲಿ ನಮ್ಮ ಸರ್ಕಾರ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ.

ವೇದಿಕೆಯ ಮೇಲೆ ಮಾತನಾಡಿರುವ ವಿಷಯಕ್ಕೆ ವೇದಿಕೆಯಲ್ಲೇ ಉತ್ತರ ನೀಡುವ ಅವಕಾಶ ಅವರಿಗಿತ್ತು. ಆದರೆ, ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ವರ್ತಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

ಈ ಭಾಗದ ಪ್ರತಿನಿಧಿಗಳಾಗಿ ಕೇವಲ ಘೋಷಣೆ ಮಾಡುವುದರಲ್ಲೇ ಕಾಲ ಕಳೆದಿದ್ದಾರೆ. ಆದರೆ, ಅವನ್ನೆಲ್ಲ ಕಾರ್ಯರೂಪಕ್ಕೆ ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಅವರು ಈ ಜಿಲ್ಲೆಗಾಗಿ ಮಾಡಿರುವ ಕೆಲಸಗಳನ್ನು ನಾವು ಅಲ್ಲಗಳೆಯುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಇದನ್ನು ಮೀರಿ ಕೃಷಿ, ಕೈಗಾರಿಕೆ, ಶಿಕ್ಷಣ,ಉದ್ಯೋಗಕ್ಕೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆ ತಂದಿದ್ದೇವೆ.

Koo App

ಮಾಜಿ ಸಿಎಂ @h_d_kumaraswamy ಅವರು ಹೇಳಿರುವಂತೆ ಡಿಕೆ ಬ್ರದರ್ಸ್‌ಗಳಿಗೆ ಅಭದ್ರತೆ ಕಾಡುತ್ತಿದೆ. ಗೂಂಡಾಗಳನ್ನು ಕಟ್ಟಿ ಮೆರೆದವರನ್ನು ಮರೆಯಾಗಿಸುವ ಕಲೆ ನಮ್ಮ ರಾಮನಗರದ ಜನತೆಗೆ ಗೊತ್ತಿದೆ. ಇಲ್ಲಿ ಅಭಿವೃದ್ಧಿಗೆ ಮಾತ್ರ ಬೆಲೆ. ಹಾದಿ ತಪ್ಪಿದ ರಾಜಕಾರಣಿಗಳಿಂದ ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವುದು ಬೇಡ. #Congress_Goondagiri

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 4 Jan 2022

ಕೆಂಪೇಗೌಡರು ಆಡಳಿತ ನಡೆಸಿದ ಈ ಪುಣ್ಯ ಭೂಮಿಯಲ್ಲಿ ಕೇವಲ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಮಾತ್ರ ಅವಕಾಶ ಎಂಬುದನ್ನು ನಮ್ಮ ಸರ್ಕಾರ ತೋರಿಸಿಕೊಟ್ಟಿದೆ. ಜಿಲ್ಲೆಯ ಜನತೆಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯ ಒದಗಿಸುವ ಜತೆ ‘ನವ ರಾಮನಗರ ನಿರ್ಮಾಣ’ ನಮ್ಮ ಗುರಿ. ಇದನ್ನು ತಲುಪಲು ಯಾವೊಂದು ದುಷ್ಟ ಶಕ್ತಿಯೂ ಅಡ್ಡಿ ಬರಲು ಸಾಧ್ಯವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *