ಅಪೆಕ್ಸ್‌ ಬ್ಯಾಂಕ್‌ ಚುನಾವಣಾ ಸಭೆ; ಸಿಎಂ ಎದುರೇ ಕೆ.ಎನ್‌ ರಾಜಣ್ಣ – ಸಚಿವ ಸುಧಾಕರ್ ನಡ್ವೆ ಜಟಾಪಟಿ

1 Min Read

– ಅಪೆಕ್ಸ್‌ ಬ್ಯಾಂಕ್ ನಷ್ಟಕ್ಕೆ ಸಿಲುಕಿದೆ – ರಾಜಣ್ಣ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಅಪೆಕ್ಸ್‌ ಬ್ಯಾಂಕ್‌ ಚುನಾವಣೆಗೆ ಸಂಬಂಧಿಸಿದ ಸಭೆಯಲ್ಲಿ ಸಚಿವ ಸುಧಾಕರ್‌ ಹಾಗೂ ಮಾಜಿ ಸಚಿವ ಕೆ.ಎನ್‌ ರಾಜಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ.

ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದಾಗಲೇ ಸಚಿವ ಸುಧಾಕರ್‌, ಯಾರಾದ್ರೂ ಹೊಸಬರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ರೆ ಒಳ್ಳೆಯದು ಅಂತ ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ರಾಜಣ್ಣ ಅವರು, ಹೊಸಬರಾಗಲಿ, ಅವರಾಗ್ಲಿ, ಇವರಾಗ್ಲಿ ಅಂತ ನೀನು ಹೇಳಬೇಡ ಅಂದಿದ್ದಾರೆ. ಮತ್ತೆ ಕೆರಳಿದ ಸುಧಾಕರ್‌ ಅವರು, ಅಪೆಕ್ಸ್ ಬ್ಯಾಂಕ್ ನಲ್ಲೂ ಹೀಗೆ ಡಿಕ್ಟೇಟರ್ ಶಿಪ್ ಮಾಡ್ತಾರೆ ರಾಜಣ್ಣ, ಅದಕ್ಕೆ ಬ್ಯಾಂಕ್ ನಷ್ಟಕ್ಕೆ ಸಿಲುಕಿದೆ ಅಂತ ದೂರಿದ್ರು.

ಬಳಿಕ ಸಿಎಂ ಸಿದ್ರಾಮಯ್ಯ ಇಬ್ಬರನ್ನು ಸಮಾಧಾನಪಡಿಸಿದರು. ನಂತ್ರ ಕೆ.ಎನ್‌ ರಾಜಣ್ಣ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರನ್ನ ಸಭೆಯಿಂದ ಹೊರಗೆ ಕಳುಹಿಸಿ ನಾಲ್ವರು ನಿರ್ದೇಶಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಿದರು.

ಸಭೆಯಲ್ಲಿ ರಾಜಣ್ಣ ವಿರುದ್ದ ನಿರ್ದೇಶಕರ ದೂರನ್ನ ರಾಜಣ್ಣ ಬೆಳ್ಳಿ ಪ್ರಕಾಶ್ ಬೆಂಬಲಿಸಿದರು. ಅವರ ಅಧ್ಯಕ್ಷತೆಯಲ್ಲಿ ಅಪೆಕ್ಸ್ ಬ್ಯಾಂಕ್ ಸಾಲದ ಹಂತಕ್ಕೆ ಬಂದಿದೆ ಎಂಬ ದೂರುಗಳು ಕೇಳಿಬಂತು. ಎಲ್ಲವನ್ನು ಆಲಿಸಿದ ಸಿಎಂ, ಚುನಾವಣೆ ಮುಂದೂಡುವುದಾಗಿ ಭರವಸೆ ನೀಡಿದರು. ಸಹಕಾರಿ ಸಂಘಗಗಳ ನಿಯಮ 121 ರ ಅನ್ವಯ 6 ತಿಂಗಳ ಕಾಲ ಚುನಾವಣೆ ಮುಂದೂಡಲು ಅವಕಾಶ ಇದೆ. ಅದರಂತೆ ಮುಂದೂಡುವುದಾಗಿ ಭರವಸೆ ನೀಡಿದರು.

ನಿರ್ದೇಶಕ ಸ್ಥಾನಕ್ಕೆ ಕೆಎನ್‌ಆರ್‌ ನಾಮಪತ್ರ ಸಲ್ಲಿಕೆ
ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಚಿವ ಕೆ.ಎನ್ ರಾಜಣ್ಣ (KN Rajanna) ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ಬೆನ್ನಲ್ಲೇ ಡಿಸಿಎಂ ಸಂಬಂಧಿ ಎಂಎಲ್‌ಸಿ ರವಿ ಅವರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಡಿಕೆಶಿ ಆಪ್ತ ಶಿವಮೊಗ್ಗದ ಮಂಜುನಾಥ್ ಗೌಡ ಸಹಾ ನಾಮಪತ್ರ ಸಲ್ಲಿಸಿದ್ದಾರೆ.

Share This Article