ನಾನೂ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರ್ತೇನೆ, ರೆಡಿ ಇದ್ದೀರಾ?: ಹಿಂದೂ ಸಂಘಟನೆಗಳಿಗೆ ಹೆಚ್‌ಡಿಕೆ ಸವಾಲ್

Public TV
3 Min Read

ಬೆಂಗಳೂರು: ಹಲಾಲ್ ಕಟ್, ಜಟ್ಕಾ ಕಟ್ ಬಿಟ್ಟುಬಿಡಿ. ಬೆಲೆ ಏರಿಕೆ ವಿರುದ್ಧ ಹೋರಾಡಿ. ನಾನೂ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರುತ್ತೇನೆ. ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ರೆಡಿ ಇದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಬೆಂಗಳೂರಿನ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್, ಹಿಜಬ್ ವಿವಾದ ಸೇರಿದಂತೆ ಭಜರಂಗದಳ, ಹಿಂದೂಪರ ಸಂಘಟನೆಗಳ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು.

ಎಲ್ಲಿ ಇತ್ತು ಜಾತಿ ವ್ಯವಸ್ಥೆ? ಎಲ್ಲಿ ಇತ್ತು ಹಿಂದೂ ದೇಶ? ಎಲ್ಲವೂ ನಮ್ಮನಮ್ಮ ಅನುಕೂಲಕ್ಕೆ ಮಾಡಿಕೊಂಡದ್ದು. ಧರ್ಮ ವಿಭಜನೆ ಮಾಡಿ ಮಜಾ ತಗೊಳ್ಳುವವರು, ಉರಿಯುವ ಮನೆಯಲ್ಲಿ ಗಳ ಇರಿಯೋ ಕಾಯಕ ಮಾಡ್ತಿದ್ದೀರಿ. ಬಿಜೆಪಿ ಹಿಂದೂ ಧರ್ಮದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿಲ್ಲ, ಅವರಿಗೆ ಬೇಕಾದಗ ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲಾ ಇಲ್ಲಿಗೇ ನಿಲ್ಲಿಸಿ, ಬಡವರನ್ನ ರಕ್ಷಿಸಿ ಎಂದು ಕರೆನೀಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಪದ ಬಳಕೆಗೆ ಹೆಚ್‌.ಡಿ.ಕುಮಾರಸ್ವಾಮಿ ವಿಷಾದ

KUMARASWAMY

ಬಿಜೆಪಿ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಾಲೂ ಇದೆ ಎರಡು ರಾಷ್ಟ್ರೀಯ ಪಕ್ಷಗಳು 150ರ ರೋಡ್ ಮ್ಯಾಪ್ ಪ್ಲಾನ್‌ ಮಾಡಿಕೊಂಡು ಮನೆ ಮನೆಗೆ ಬೆಂಕಿ ಹಚ್ಚಲು ಹೊರಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಸಾರಿದ್ದ ಸಿದ್ದರಾಮ್ಯಯ ಅವರೇ ಈಗೇನು ದೊಡ್ಡ ಸಾಧನೆ ಮಾಡಿದ್ದೀರಾ? ಹಿಜಬ್ ಹೆಸರು ಹೇಳ್ಬೇಡಿ ಹಿಂದೂ ಓಟ್ ಹೋಗುತ್ತೆ ಎಂದು ನಿಮ್ಮ ಅಧ್ಯಕ್ಷರೇ ಹೇಳಿದ್ದಾರೆ. ಹಿಂದೂ ಮುಸ್ಲಿಂ ನವರು ದಡ್ಡರಲ್ಲ. ವಿಶ್ವ ಹಿಂದೂ ಪರಿಷತ್‌ನವರು ಬೆಂಕಿ ಹಚ್ಚಲು ಬರುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬಹಳ ಸಲ ಗಂಡಸ್ತತನ ಪ್ರೂವ್ ಮಾಡಿದ್ದಾರೆ: ಸಿ.ಟಿ.ರವಿ

ಮೌನಿ ಬಾಬಾ ಬೊಮ್ಮಾಯಿ: ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ, ಇಷ್ಟೆಲ್ಲಾ ವಿವಾದ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಬಾಬಾ ಆಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.

KUMARASWAMY

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಸೌಹಾರ್ದತೆಗೆ ಧಕ್ಕೆ ಬಂದಾಗ ಮೌನವಾಗಿದ್ದವರು ಯಾರು? ಅಧಿವೇಶನದಲ್ಲಿ ಸುಮ್ಮನೆ ಕೂತವರು ಯಾರು? ಮತಾಂತರ ಬಿಲ್ ಬಗ್ಗೆ ಬೆಳಗಾವಿಯಲ್ಲಿ ಎದುರಿಸಲಾಗದೇ ಪಲಾಯನ ಮಾಡಿದ್ದು ಯಾಕೆ? ಗೋಹತ್ಯೆ ಬಿಲ್ ಬಂದಾಗ ಸದನದಲ್ಲಿ ಗೊಂದಲ ಸೃಷ್ಟಿಸಿದ್ದು ಯಾರು? ಗೋಹತ್ಯೆ ನಿಷೇಧ ಕಾಯ್ದೆ ವಿರುದ್ದ ಮೊದಲು ರಾಷ್ಟ್ರಪತಿಗೆ ದೂರು ಕೊಟ್ಟಿದ್ದು ದೇವೇಗೌಡರು. ನಮ್ಮ ಪಕ್ಷವೇ ಮೊದಲು ಅದರ ಬಗ್ಗೆ ಧ್ವನಿ ಎತ್ತಿದ್ದು. ನಾವು ಅದರ ವಿರುದ್ಧ ಮತ ಚಲಾಯಿಸಲು ತಯಾರಿದ್ದೆವು. ಅವರ ತಪ್ಪು ಇಟ್ಕೊಂಡು ನಮ್ಮ ಬಗ್ಗೆ ಮತನಾಡಲು ಕಾಂಗ್ರೆಸ್‌ಗೆ ನೈತಿಕತೆ ಏನಿದೆ ಎಂದು ಹೇಳಿದರು. ಇದನ್ನೂ ಓದಿ: ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ: ಈಶ್ವರಪ್ಪ

ರಾಜ್ಯದಲ್ಲಿ ಬೆಂಕಿಹಚ್ಚಿದ್ದು ಕಾಂಗ್ರೆಸ್
ರಾಹುಲ್‌ಗಾಂಧಿ ಬಂದಾಗ ಸಿದ್ದರಾಮಯ್ಯ, ಹಲಾಲ್ ಹಾಗೂ ಹಿಜಬ್ ವಿಚಾರದಲ್ಲಿ ನಾವು ಮಾತನ್ನಾಡಬೇಕಿತ್ತು ಎಂದು ಹೇಳುತ್ತಾರೆ. ಇಷ್ಟಾದ ಮೇಲೂ ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂದು ಹೇಳುತ್ತಾರೆ. ನೀವೆ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದು, ನೀವೇ ಬಿಜೆಪಿ ಸರ್ಕಾರ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಇನ್ನಾದರೂ ಹಲಾಲ್, ಹಿಜಬ್ ವಿಚಾರದಲ್ಲಿ ಧೈರ್ಯವಾಗಿ ಎದುರಿಸಿ ಎಂದು ಕುಟುಕಿದರು.

KUMARASWAMY

ಅಲ್ಲದೆ, ಬಿಜೆಪಿಯವರು ನಾನು ದಾರ್ಶನಿಕ ಎನ್ನುತ್ತಾರೆ, ನಾನು ದಾರ್ಶನಿಕ ಎಂದು ಬೋರ್ಡ್ ಹಾಕಿಕೊಂಡಿಲ್ಲ, ನೀವೆ ಹಾಕಿಕೊಂಡಿರುವುದು.ನಾನು ಸಮಾಜ ಪರಿವರ್ತನಾಕಾರಕ ಅಲ್ಲ, ಇಂತ ವಿಷಯ ತೆಗೆದು ಮತಬ್ಯಾಂಕ್ ಮಾಡಲ್ಲ, ಬೆಂದ ಮನೆಯಲ್ಲಿ ಗಳ ಇಡುವ ಬುದ್ಧಿ ನನಗಿಲ್ಲ, ಕಂದಾಚಾರ ಇರುವ ನೀವು ನನಗೆ ಬುದ್ದಿ ಹೇಳುತ್ತೀರಾ? ಎಂದು ತಿರುಗೇಟು ನೀಡಿದ್ದಾರೆ.

ಯುಗಾದಿಗೆ ಇಷ್ಟು ಪ್ರಚಾರ ಯಾವತ್ತು ಸಿಕ್ಕಿರಲಿಲ್ಲ. ಒಳ್ಳೆಯ ಮನರಂಜನೆ ಸಿಕ್ಕಿತು. ಪ್ರತಿದಿನ ಯುಗಾದಿ ಮಾದರಿಯ ಸುದ್ದಿಗಳೇ ವಿಜ್ರಂಭಿಸಲಿದೆ. ಮುಂದಿನ ಚುನಾವಣೆ ವರೆಗೂ ಪರಿಸ್ಥಿತಿ ಹೀಗೆ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *