ಪ್ರಧಾನಿ ಮೋದಿಗೆ ವರದಿಗಾರ್ತಿ ಕೇಳಿದ ಅನಿರೀಕ್ಷಿತ ಪ್ರಶ್ನೆಗೆ ಜನ ಉತ್ತರಿಸಿದ್ದು ಹೀಗೆ

Public TV
1 Min Read

ಮಾಸ್ಕೋ:ಪ್ರಧಾನಿ ನರೇಂದ್ರ ಮೋದಿ ಅವರನ್ನು ವರದಿಗಾರ್ತಿ ಒಬ್ಬರು ನೀವು ಟ್ವಿಟ್ಟರ್‍ನಲ್ಲಿ ಇದ್ದೀರಾ ಎಂದು ಪ್ರಶ್ನಿಸಿ ಈಗ ಮುಜುಗರಕ್ಕೊಳಗಾಗಿದ್ದಾರೆ.

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನ್ನು ಸಂದರ್ಶನ ಮಾಡಲು ಅಮೆರಿಕದ ಎನ್‍ಬಿಸಿ ವರದಿಗಾರ್ತಿ ಮೆಗಿನ್ ಕೆಲ್ಲಿ ತೆರಳಿದ್ದರು. ಈ ವೇಳೆ ಮೆಗಿನ್ ಇಬ್ಬರು ನಾಯಕರಿಗೆ ಶೇಕ್ ಹ್ಯಾಂಡ್ ಮಾಡಿದರು. ಈ ಸಂದರ್ಭದಲ್ಲಿ ಮೋದಿ ಅವರು ನಿಮ್ಮ ಟ್ವೀಟ್ ನೋಡಿದೆ. ಛತ್ರಿ ಜೊತೆಗೆ ಇರುವ ಫೋಟೋವನ್ನು ನೋಡಿದೆ ಎಂದು ಹೇಳಿದಾಗ ಮೆಗಿನ್ ಅವರು ನೀವು ಟ್ವಿಟ್ಟರ್‍ನಲ್ಲಿ ಇದ್ದೀರಾ ಎಂದು ಪ್ರಶ್ನಿಸಿದರು. ಈ ಅನಿರೀಕ್ಷಿತ ಪ್ರಶ್ನೆಗೆ ಪ್ರಧಾನಿ ಮೋದಿ ನಕ್ಕು ಸುಮ್ಮನಾದರು.

ಮೆಗಿನ್ ಅವರು ಪುಟಿನ್ ಮತ್ತು ಮೋದಿ ಅವರ ಜೊತೆಗಿನ ಮಾತನಾಡುವ ದೃಶ್ಯವನ್ನು ಎನ್‍ಬಿಸಿ ವಿಡಿಯೋ ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಕೆಲ್ಲಿ ಮೆಗಿನ್ ಅವರು ಈ ಪ್ರಶ್ನೆ ಮಾಡಿದ್ದನ್ನು ಟ್ವಿಟ್ಟರ್ ಬಳಕೆದಾರರು ಕೆಲ್ಲಿಯ ಕಾಲೆಳೆಯುತ್ತಿದ್ದಾರೆ.

https://twitter.com/Banarasi_Hindu/status/870443135536680961

https://twitter.com/NitinKapoor2020/status/870486694327222272

https://twitter.com/NitinKapoor2020/status/870487598979964928

https://twitter.com/Banarasi_Hindu/status/870525803813109760

 

Share This Article
Leave a Comment

Leave a Reply

Your email address will not be published. Required fields are marked *