ಇತ್ತೀಚೆಗೆ ಸಮಂತಾ (Samantha) ಮದುವೆಯಾಗಿ ಟ್ರೆಂಡ್‌ನಲ್ಲಿದ್ದಾರೆ. ಆದರೆ, ಮಾಜಿ ಪತಿ ನಾಗಚೈತನ್ಯ (Naga Chaitanya) ಸೈಡ್‌ಲೈನ್‌ಗೆ ಸರಿದಿದ್ದಾರೆ. ಈ ನಡುವೆ ನಾಗಚೈತನ್ಯ ತಂದೆ ಅಂದ್ರೆ ನಾಗಾರ್ಜುನ ಹೇಳಿರುವ ಒಂದು ಮಾತು ಭಾರೀ ಚರ್ಚೆಗೀಡಾಗುತ್ತಿದೆ. ಕಾರಣ ಇದೀಗ ನಾಗಾರ್ಜುನ ಮೊಮ್ಮಗು ಆಗಮನದ ಕುರಿತು ಮಾತನಾಡಿದ್ದಾರೆ. ಈ ಮೂಲಕ ನಾಗಚೈತನ್ಯ ಹಾಗೂ ಶೋಭಿತಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ನಾಗಾರ್ಜುನ ತಾತ ಆಗುತ್ತಿದ್ದಾರಾ? ಈ ಎಲ್ಲಾ ಪ್ರಶ್ನೆಗಳು ಎದ್ದಿದೆ.
ಇತ್ತೀಚೆಗೆ ನಾಗಚೈತನ್ಯ ತಂದೆ ತೆಲುಗು ಸ್ಟಾರ್ ನಾಗಾರ್ಜುನ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೊದಲ ಮೊಮ್ಮಗನ ನಿರೀಕ್ಷೆಯಲ್ಲಿರೋದಾಗಿ ಹೇಳಿದ್ದಾರೆ. ಯಾವಾಗ, ಏನು ಅದೆಲ್ಲ ಸಮಯ ಬಂದಾಗ ಸಹಜವಾಗೇ ತಿಳಿಯುತ್ತೆ. ಮೊಮ್ಮಗು ಆಸೆಯಂತೂ ಇದೆ ಎಂದಿದ್ದಾರೆ. ಹೀಗಾಗಿ, ಸೊಸೆ ಶೋಭಿತ ಹಾಗೂ ಮಗ ನಾಗಚೈತನ್ಯ ಶೀಘ್ರದಲ್ಲೇ ಅಪ್ಪ-ಅಮ್ಮ ಆಗ್ತಾರಾ? ಈ ಬಗ್ಗೆ ಟಾಲಿವುಡ್‌ನಲ್ಲಿ ಗುಸು ಗುಸು ಚರ್ಚೆ ಜೋರಾಗಿದೆ. ಇದನ್ನೂ ಓದಿ: ತಲೈವ ಜೊತೆ ಸೊಂಟ ಬಳುಕಿಸೋಕೆ ನೋರಾ ಫತೇಹಿ ರೆಡಿ
ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಬಳಿಕ ಕಳೆದ ವರ್ಷ ಶೋಭಿತಾರನ್ನ ನಾಗಚೈತನ್ಯ ಪ್ರೀತಿಸಿ ಮುದುವೆಯಾದ್ರು. ಮದುವೆಯಾಗಿ ಒಂದು ವರ್ಷ ಕಳೆಯೋಕೂ ಮುನ್ನವೇ ಇತ್ತೀಚೆಗೆ ಸಮಂತಾ ನಿರ್ದೇಶಕ ರಾಜ್‌ರನ್ನ ಪ್ರೀತಿಸಿ ಮದುವೆಯಾದ್ರು. ಇದೀಗ ನಾಗಚೈತನ್ಯ ಹಾಗೂ ಶೋಭಿತ ಶೀಘ್ರದಲ್ಲೇ ಚೊಚ್ಚಲ ಮಗುವನ್ನ ಪಡೆಲಿದ್ದಾರೆ ಎಂದು ವದಂತಿ ಹಬ್ಬಿದೆ. ಇದು ಸಹಜ ಪ್ರಕ್ರಿಯೆ ಆಗಿದ್ದರೂ ಸಮಂತಾಗೂ ಮುನ್ನ ನಾಗಚೈತನ್ಯ ಗುಡ್‌ನ್ಯೂಸ್ ಕೊಡಲು ಮುಂದಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.


