ನಾನು ಜೈಲಲ್ಲಿ ಇದ್ದೆ, ಒಂದು ಬೀಡಿಗೆ ಎಷ್ಟು ದುಡ್ಡು ಕೊಡ್ಬೇಕು ಗೊತ್ತು : ಆರಗ ಜ್ಞಾನೇಂದ್ರ

Public TV
2 Min Read

ಚಿಕ್ಕಮಗಳೂರು: ನಾನು ಖೈದಿಯಾಗಿ ಜೈಲಲ್ಲಿ ಇದ್ದವನು. 1975ರಲ್ಲಿ ಎಮರ್ಜೆನ್ಸಿ ಟೈಮಲ್ಲಿ ಆರು ತಿಂಗಳು ಜೈಲಿನಲ್ಲಿ ಇದ್ದೆ. ಜೈಲಲ್ಲಿ ಏನಿರುತ್ತೆ? ಏನಿರಲ್ಲ? ಹೊರಗಿನಿಂದ ಒಂದು ಬೀಡಿ ತರಿಸಿಕೊಳ್ಳಲು ಎಷ್ಟು ಹಣ ನೀಡಬೇಕಿತ್ತು ಎಲ್ಲಾ ನನಗೆ ಗೊತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಜಿಲ್ಲೆಯ ತರೀಕೆರೆಯಲ್ಲಿ ಮಾತನಾಡಿದ ಅವರು, ಜೈಲಲ್ಲಿ ಊಟ ಸರಿ ಇರಲ್ಲ. ಕೆಮಿಕಲ್ ಹಾಕಿ ಕೊಡುತ್ತಾರೆ ಎಂದು ಖೈದಿ ಬರಿದಿದ್ದಾರೆ ಎನ್ನಲಾದ ಪತ್ರದ ಸಂಬಂಧ ಮಾತನಾಡಿದ್ದಾರೆ. ಖೈದಿಯೇ ಬರೆದಿದ್ದಾರೋ ಅಥವಾ ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ ನನ್ನ ಫೋನಿಗೂ ಬಂದಿದೆ. ನಾನು ಪರಪ್ಪನ ಅಗ್ರಹಾರ ಜೈಲಿಗೆ ಸಂದರ್ಶನ ಮಾಡಲು ಹೋಗಿದ್ದೆ. ಸುಮಾರು ಎರಡು-ಮೂರು ಗಂಟೆ ಇಡೀ ಜೈಲು ಸುತ್ತಿದ್ದೇನೆ. ಅಲ್ಲಿರುವವರ ಜೊತೆ ಮಾತನಾಡಿದ್ದೇನೆ. ಎಲ್ಲಾ 100 ಪರ್ಸೆಂಟ್ ಎಂದು ನಾನು ಹೇಳಲ್ಲ. ಸಣ್ಣಪುಟ್ಟ ನ್ಯೂನ್ಯತೆಗಳಿವೆ. ಅಧಿಕಾರಿಗಳ ಜೊತೆ ಮಾತನಾಡಿ ಎಚ್ಚರಿಕೆ ಕೊಟ್ಟು ಬಂದಿದ್ದೇನೆ ಎಂದರು.

ಎಮರ್ಜೆನ್ಸಿ ವೇಳೆ ಆರು ತಿಂಗಳು ನಾನು ಖೈದಿಯಾಗಿ ಜೈಲಲ್ಲಿ ಇದ್ದೆ. ನಾನು, ಜೆ.ಎಚ್.ಪಟೇಲ್, ಡಿ.ಎಚ್.ಶಂಕರಮೂರ್ತಿ ಎಲ್ಲರೂ ಜೈಲಲ್ಲೇ ಇದ್ದೆವು ಎಂದು ತಮ್ಮ ಜೈಲುವಾಸದ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ : ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ 

ಆರಗ ಹೇಳಿದ್ದು ಏನು?
ನಾನೇ ಜೈಲಿಗೆ ಹೋದಾಗ ಗಂಜಿ ಕೊಟ್ಟಿದ್ದರು. ಅದರ ಒಳಗೆ ಅಕ್ಕಿ ಹುಳ ತೇಲುತ್ತಿತ್ತು. ಆಗ ನಾವೇ ಅಕ್ಕಿಯನ್ನ ತೆಗೆದು ಹುಳಗಳನ್ನು ಆರಿಸಿ ಆಮೇಲೆ ಅಡುಗೆ ಮಾಡಿಸಿದ್ದೆವು. ಕಳಪೆ ಅಕ್ಕಿ, ಬೆಳೆ, ಬೆಲ್ಲ ಎಲ್ಲಿ ರಿಜೆಕ್ಟ್ ಆಗಿರುತ್ತಿತ್ತೋ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿತ್ತೋ ಆ ಕೆಟ್ಟ ಕಳಪೆ ಗುಣಮಟ್ಟದ್ದನ್ನ ಜೈಲಿಗೆ ವಿತರಿಸುತ್ತಿದ್ದರು.

ಜೈಲಿಗೆ ಫುಡ್ ಒದಗಿಸುವ ಕಂಟ್ರಾಕ್ಟ್ ಒಂದು ದಂಧೆ. ಆದರೆ ಈಗ ಆ ರೀತಿ ಇಲ್ಲ, ಹಿಂದೆ ಆ ರೀತಿ ನಡೆಯೋದು ಎಂದಿದ್ದಾರೆ. ಈಗ ಜೈಲಿನಿಂದ ಬಿಡುಗಡೆ ಮಾಡಬೇಕೆಂದರೆ ಕೋರ್ಟಿನಿಂದ ಆದೇಶ ಮಾಡುತ್ತಾರೆ. ಆದರೆ, ಹಿಂದೆ ಜೈಲಿನಿಂದ ಹೊರಗಡೆ ಕಳಿಸೋದಕ್ಕೂ ದುಡ್ಡು ತೆಗೆದುಕೊಳ್ಳುತ್ತಿದ್ದರು. ಹಣ ಕೊಟ್ಟರೆ ಮಾತ್ರ ಹೊರಗೆ ಬಿಡುತ್ತಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ- ಪತ್ನಿಯ ಗುಪ್ತಾಂಗಕ್ಕೆ ಹೊಲಿಗೆ

ಹಣ ಕೊಡದಿದ್ದರೆ ನಾಳೆ ಬಾ, ನಾಡಿದ್ದು ಬಾ ಎಂದು ಸತಾಯಿಸುತ್ತಿದ್ದರು. ಜೈಲಿನಲ್ಲಿ ಇದ್ದವರನ್ನ ಕರೆದುಕೊಂಡು ಹೋಗಲು ಬಂದವರು ಅಲ್ಲೇ ಕೂರಬೇಕಿತ್ತು. ಕೆಳಸ್ಥರದ ನೌಕರರು ಹಾಗೂ ಅಧಿಕಾರಿಗಳಿಂದ ಆ ರೀತಿಯ ಕೆಟ್ಟ ವ್ಯವಸ್ಥೆ ಇತ್ತು. ಇಗ ಅದ್ಯಾವುದು ಇಲ್ಲ. ಈಗ ಎಲ್ಲರಿಗೂ ಒಟ್ಟಿಗೆ ಅಡುಗೆ ಮಾಡುತ್ತಾರೆ.

ಮುದ್ದೆ ತಿನ್ನೋರಿಗೆ ಮುದ್ದೆ. ಚಪಾತಿ ತಿನ್ನೋರಿಗೆ ಚಪಾತಿ. ನಾವು ಜೈಲಲ್ಲಿ ಇದ್ದಾಗ ಚಹಾ ಇರಲಿಲ್ಲ. ಈಗ ಬೆಳಗ್ಗೆ ಎದ್ದ ಕೂಡಲೇ ಜೈಲಲ್ಲಿ ಚಹಾ ಕೊಡುತ್ತಾರೆ. ಬೆಳಗ್ಗೆ ತಿಂಡಿ ಇದೆ. ಯಾವ ದಿನ ಯಾವ ತಿಂಡಿ ಎಂದು ಬೋರ್ಡ್ ಹಾಕಿದ್ದಾರೆ. ಜೈಲಿನ ಸ್ಥಿತಿ ಈಗ ಹೇಗಿದೆ ಎಂದು ಗೊತ್ತಿಲ್ಲ. ಮೊದಲಿನಂತೆ ಇಲ್ಲ. ಅಧಿಕಾರಿಗಳ ಜೊತೆ ಮಾತನಾಡಿ, ಎಚ್ಚರಿಕೆ ನೀಡಿದ್ದೇನೆ. ಎಲ್ಲಾ ಸರಿ ಮಾಡುತ್ತೇವೆಂದು ಎಂದಿದ್ದಾರೆ. ಮತ್ತೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *